ದರ್ಶನ್ ಗೆ ಪೊಲೀಸರ ಶಾಕ್

ದರ್ಶನ್ ಗೆ ಪೊಲೀಸರ ಶಾಕ್

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಸುಮಾರು 7 ತಿಂಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ ಅವರ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಪೊಲೀಸರು ಅಮಾನತ್ತುಗೊಳಿಸಿದ್ದಾರೆ.

ದರ್ಶನ್ ಅವರು ಸೆಲೆಬ್ರಿಟಿ ಎಂಬ ಕಾರಣಕ್ಕೆ ಗನ್ ಇಟ್ಟುಕೊಳ್ಳಲು ಅನುಮತಿ ನೀಡಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು.   ಆದರೆ ಕೇಸ್ ಮುಗಿಯುವವರೆಗೂ ಗನ್​​ ಲೈಸೆನ್ಸ್​​ನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಡಲು ಪೊಲೀಸರು ನಿರ್ಧಾರ ಕೈಗೊಂಡಿದ್ದಾರೆ.

ದರ್ಶನ್ ನಾನು ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಸೇರುತ್ತಾರೆ. ಈ ವೇಳೆ ನನ್ನ ಆತ್ಮರಕ್ಷಣೆಗೆ ಗನ್ ಬೇಕು ಎಂದಿದ್ದರು. ಈ ಬಗ್ಗೆ ಪರಶೀಲನೆ ನಡೆಸಿದ ಪೊಲೀಸರು ಪ್ರಮುಖ ಕೇಸ್​​ನಲ್ಲಿ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗನ್​​ ಲೈಸೆನ್ಸ್​​ನ್ನು   ಅಮಾನತ್ತಿನಲ್ಲಿಡಲು ನಿರ್ಧಾರ ಮಾಡಿದ್ದಾರೆ.

ದರ್ಶನ್ ಹೆಸರಿನಲ್ಲಿರುವ ಎರಡು ಗನ್ ಆರ್​ ಆರ್​ ನಗರ ಪೊಲೀಸರಿಗೆ ಹಸ್ತಾಂತರ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ದರ್ಶನ್ ರೇಣುಕಾಸ್ವಾಮಿ ಕೇಸ್​ನಲ್ಲಿ ಆರೋಪಿಯಾಗಿದ್ದರಿಂದ ಗನ್ ಲೈಸೆನ್ಸ್ ಕ್ಯಾನ್ಸಲ್​ ಗೆ ಪೊಲೀಸರು ಪತ್ರ ಬರೆದಿದ್ದರು. ಈ ಹಿಂದೆ ಪೊಲೀಸ್​ ನೋಟಿಸ್​ಗೆ ದರ್ಶನ್ ಉತ್ತರವನ್ನು ನೀಡಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!