ವೀರ ಚಂದ್ರಹಾಸ

‘ವೀರ ಚಂದ್ರಹಾಸ’ ಪೋಸ್ಟರ್ ರಿಲೀಸ್

ರವಿ ಬಸ್ರೂರ್ ನಿರ್ದೇಶನದ ‘ವೀರ ಚಂದ್ರಹಾಸ’ ಚಿತ್ರದ ನಾಡಪ್ರಭು ಶಿವ ಪುಟ್ಟಸ್ವಾಮಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿರುವ ಕ್ಯಾರೆಕ್ಟರ್ ಪೋಸ್ಟರ್ ನ್ನು ಚಿತ್ರತಂಡ ಬಹಿರಂಗಪಡಿಸಿದೆ.

ವೀರ ಚಂದ್ರಹಾಸ  ಚಿತ್ರದಲ್ಲಿ ಶಿವಣ್ಣನ ಪಾತ್ರ ವಿಶೇಷವಾಗಿದೆ. ನಟ ಶಿವರಾಜಕುಮಾರ್‌ ಬಂದ ಮೇಲೆ ಉತ್ಸಾಹ ಮತ್ತಷ್ಟು ಹೆಚ್ಚಿತು. ಯಕ್ಷಗಾನದ ವೇಷಭೂಷಣದಲ್ಲಿ ಅವರ ಲುಕ್  ರಸದೌತಣವಾಗಿದೆ. ಅವರು  ಚಿಕಿತ್ಸೆಯಲ್ಲಿದ್ದಾಗಲೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ಪಾತ್ರಗಳು ಜೀವನದಲ್ಲಿ ಒಮ್ಮೆ ಬರುತ್ತವೆ ಎಂದು ಅವರು ನನಗೆ ಹೇಳಿದರು.  ಸವಾಲನ್ನು ಅವರು ಸ್ವೀಕರಿಸುತ್ತಾರೆ’ ಎನ್ನುತ್ತಾರೆ ರವಿ ಬಸ್ರೂರು.

‘ವೀರ ಚಂದ್ರಹಾಸ’ ಚಿತ್ರ ಕುಂತಲ ಸಾಮ್ರಾಜ್ಯದ ಚಂದ್ರಹಾಸನ ಕಥೆ ಕುರಿತು ಹೇಳುತ್ತದೆ. ಕುಂತಲ ಸಾಮ್ರಾಜ್ಯ ಮಹಾಭಾರತಕ್ಕೂ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ. ಸಾಂಪ್ರದಾಯಿಕ ಯಕ್ಷಗಾನದೊಂದಿಗೆ ಐತಿಹಾಸಿಕ ಅಂಶಗಳನ್ನು ಸಂಯೋಜಿಸಿ ಪ್ರಾಚೀನ ಕಲೆಯನ್ನು ಆಧುನಿಕ ಚಿತ್ರ ನಿರ್ಮಾಣ ತಂತ್ರಗಳೊಂದಿಗೆ ವಿಲೀನಗೊಳಿಸಿ ನವೀನವಾಗಿ ಕಥೆ ಹೇಳಲು ಚಿತ್ರ ಮುಂದಾಗಿದೆ.

ವೀರ ಚಂದ್ರಹಾಸ ಚಿತ್ರದಲ್ಲಿ ಶಿಥಿಲ್ ಶೆಟ್ಟಿ, ನಾಗಶ್ರೀ ಜಿಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ ಕಡಬಾಳ್, ರವೀಂದ್ರ ದೇವಾಡಿಗ, ನಾಗರಾಜ್ ಸರ್ವೆಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಕೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್  ತಾರಾಗಣವಿದೆ.  ಸುಮಾರು 450 ಯಕ್ಷಗಾನ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರವಿ ಬಸ್ರೂರ್ ಮೂವೀಸ್ ಸಹಯೋಗದಲ್ಲಿ ಓಂಕಾರ್ ಮೂವೀಸ್ ನಿರ್ಮಿಸಿರುವ  ಚಿತ್ರವನ್ನು ಸಹ ನಿರ್ಮಾಪಕರಾದ ಗೀತಾ ರವಿ ಬಸ್ರೂರ್, ವಿಜಿ ಗ್ರೂಪ್‌ನ ದಿನಕರ್, ಅನುಪ್ ಗೌಡ ಮತ್ತು ಅನಿಲ್ ಯುಎಸ್‌ಎ ಅವರೊಂದಿಗೆ ಎನ್‌ಎಸ್ ರಾಜ್‌ಕುಮಾರ್ ನಿರ್ಮಾಪಕರಾಗಿ ನಿರ್ಮಿಸಲಿದ್ದಾರೆ. ರವಿ ಬಸ್ರೂರ್  ಚಿತ್ರದ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ.  ಚಿತ್ರ 2025ರ ದ್ವಿತೀಯಾರ್ಧದಲ್ಲಿ ಚಿತ್ರಮಂದಿರಗಳಲ್ಲಿ ಬರುವ ನಿರೀಕ್ಷೆಯಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!