ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ದರೋಡೆ ನಡೆಸಲು ಬಂದ ದುಷ್ಕರ್ಮಿಗಳು ಚಾಕು ಇರಿದಿದ್ದು, ಅವರನ್ನು ಮುಂಬೈ ನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯರಾತ್ರಿ ಸುಮಾರು 2.30 ಕ್ಕೆ ಬಾಂದ್ರಾದಲ್ಲಿರುವ ಅವರ ಮನೆಯಲ್ಲಿ ದರೋಡೆ ನಡೆಸಲು ಬಂದವರಿಂದ ಈ ಕೃತ್ಯ ನಡೆದು ಬಂದಿದೆ ಎಂದು ತಿಳಿದು ಬಂದಿದೆ. ಸೈಫ್ ಅಲಿ ಖಾನ್ ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಕುಟುಂಬದವರ ಜೊತೆ ಮಲಗಿದ್ದರು. ಮಧ್ಯರಾತ್ರಿ 2.30ರ ವೇಳೆಗೆ ಕಳ್ಳರು ಮನೆ ಒಳಗೆ ನುಗ್ಗಿದ್ದಾರೆ. ಈ ವೇಳೆ ಎಚ್ಚರ ಆಗಿ ಸೈಫ್ ಅವರು ಕಳ್ಳರನ್ನು ತಡೆಯಲು ಹೋಗಿದ್ದು, ಈ ವೇಳೆ ಕಳ್ಳರು ಹಲ್ಲೆ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಿಶೇಷ ಪೊಲೀಸರ ತಂಡ ರಚನೆ ಆಗಿದೆ. ಮನೆ ಹಾಗೂ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡಲಾಗುತ್ತಿದೆ. ಕಳ್ಳರನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ.
ಸೈಫ್ ಅಲಿ ಖಾನ್ ಬೆನ್ನಿನ ಭಾಗದಲ್ಲಿ ಕಳ್ಳರು ಇರಿದ ಚಾಕು ದೊಡ್ಡ ಗಾಯವನ್ನೇ ಮಾಡಿದೆ. ಬೆನ್ನಿನ ಮೂಳೆಗೆ ತೊಂದರೆ ಆಗಿದೆಯೇ ಎನ್ನುವ ಬಗ್ಗೆ ಪರೀಕ್ಷೆ ನಡೆಯುತ್ತಿದೆ.
Be the first to comment