ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟಿಸಿರುವ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಬಿಡುಗಡೆ ಚಿತ್ರತಂಡದ ಜಟಾಪಟಿಯಿಂದಾಗಿ ಮುಂದಕ್ಕೆ ಹೋಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶುಕ್ರವಾರ, ಜನವರಿ 10ಕ್ಕೆ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಬಿಡುಗಡೆ ಆಗುತ್ತಿತ್ತು. ಆದರೆ ಚಿತ್ರತಂಡದ ಜಗಳದಿಂದಾಗಿ ಬಿಡುಗಡೆಗೆ ಅಡ್ಡಿ ಉಂಟಾಗಿ ಸಿನಿಮಾದ ರಿಲೀಸ್ ಮುಂದಕ್ಕೆ ಹೋಗಿದೆ.
‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಬಿಡುಗಡೆಗೆ ಹೈದಾರಾಬಾದ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕಾರಣದಿಂದ ಸಿನಿಮಾದ ರಿಲೀಸ್ ಮುಂದಕ್ಕೆ ಹೋಗಿದೆ. ನಿರ್ದೇಶಕ ನಾಗಶೇಖರ್ ಮತ್ತು ಟಾಲಿವುಡ್ ನಿರ್ಮಾಪಕ ರಾಮರಾವ್ ನಡುವಿನ ಜಟಾಪಟಿ ಇದಕ್ಕೆ ಕಾರಣ ಎನ್ನಲಾಗಿದೆ.
‘ಸಂಜು ವೆಡ್ಸ್ ಗೀತಾ’ ಸಿನಿಮಾ 2011ರಲ್ಲಿ ಬಂದಿತ್ತು. ಆದರೆ ಈಗ ರಿಲೀಸ್ಗೆ ಸಿದ್ಧವಾಗಿರುವ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಕಥೆಯೇ ಬೇರೆ. ಇದು ಸೀಕ್ವೆಲ್ ಅಲ್ಲ. ಈ ಬಾರಿ ನಿರ್ದೇಶಕ ನಾಗಶೇಖರ್ ಅವರು ಸಂಪೂರ್ಣ ಬೇರೆ ಸಿನಿಮಾ ಪ್ರೇಕ್ಷಕರಿಗೆ ತೋರಿಸಲು ಸಜ್ಜಾಗಿದ್ದರು. ಆದರೆ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ.
ಚಿತ್ರಮಂದಿರದಲ್ಲಿ ಸಿನಿಮಾ ನೋಡೋಣ ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ‘ಕ್ಷಮಿಸಿ, ಸಿನಿಮಾದ ರಿಲೀಸ್ ದಿನಾಂಕ ಮುಂದೂಡಲಾಗಿದೆ’ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಹೊಸ ರಿಲೀಸ್ ಡೇಟ್ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
Be the first to comment