ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ‘ಗೇಮ್ ಚೇಂಜರ್’ ಸಿನಿಮಾ ಮುಂಗಡ ಬುಕಿಂಗ್ನಲ್ಲಿ 13.87 ಕೋಟಿ ರೂ. ಸಂಗ್ರಹಿಸಿದೆ.
‘ಗೇಮ್ ಚೇಂಜರ್’ ಸಿನಿಮಾ ಜನವರಿ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. 10,858 ಶೋಗಳಿಗೆ 4 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳ ಮಾರಾಟದ ಮೂಲಕ ‘ಗೇಮ್ ಚೇಂಜರ್’ ಸಿನಿಮಾ ಇಲ್ಲಿಯವರೆಗೆ 13.87 ಕೋಟಿ ರೂ. ಸಂಗ್ರಹಿಸಿದೆ. ಆಂಧ್ರಪ್ರದೇಶದಲ್ಲಿ 7.52 ಕೋಟಿ ರೂ., ತೆಲಂಗಾಣದಲ್ಲಿ 3.3 ಕೋಟಿ ರೂ.,ತಮಿಳುನಾಡಿನಲ್ಲಿ 59.01 ಲಕ್ಷ, ಕರ್ನಾಟಕದಲ್ಲಿ 1.06 ಕೋಟಿ ರೂ. ಹಾಗೂ ಕೇರಳದಲ್ಲಿ 2.6 ಲಕ್ಷ ಗಳಿಸಿದೆ.
ಗೇಮ್ ಚೇಂಜರ್ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರದಿಂದ ಅನುಮತಿ ಪಡೆದಿದೆ. ಆಂಧ್ರಪ್ರದೇಶದಲ್ಲಿ ಬೆಳಗಿನ ಜಾವ 1 ಗಂಟೆಯಿಂದ ಮತ್ತು ತೆಲಂಗಾಣದಲ್ಲಿ ಮುಂಜಾನೆ 4 ಗಂಟೆಯಿಂದ ಚಿತ್ರ ಪ್ರದರ್ಶನಕ್ಕೆ ‘ಗೇಮ್ ಚೇಂಜರ್’ ಸಿನಿಮಾ ಅನುಮತಿ ಪಡೆದುಕೊಂಡಿದೆ.
ಕರ್ನಾಟಕದಲ್ಲಿ ಚಿತ್ರವು 14 ಕೋಟಿ ರೂ., ತಮಿಳುನಾಡಿನಲ್ಲಿ 15 ಕೋಟಿ ರೂ. ಮತ್ತು ಕೇರಳದಲ್ಲಿ 2 ಕೋಟಿ ರೂ. ಗಳಿಸುವ ನಿರೀಕ್ಷೆ ಇದೆ. ಹಿಂದಿ ಭಾಷೆಯಲ್ಲಿ 42 ಕೋಟಿ ರೂ. ಗಳಿಸುವ ನಿರೀಕ್ಷೆ ಇದೆ. ಇದರೊಂದಿಗೆ ವಿದೇಶಿ ಮಾರುಕಟ್ಟೆಯಲ್ಲಿ 25 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆಯಿದೆ.
ಶಂಕರ್ ನಿರ್ದೇಶನದ ‘ಇಂಡಿಯನ್ 2’ ಚಿತ್ರವು 10.98 ಕೋಟಿ ರೂ.ಗಳನ್ನು ಮುಂಗಡ ಬುಕ್ಕಿಂಗ್ ಮೂಲಕ ಸಂಗ್ರಹಿಸಿತ್ತು. 2022ರಲ್ಲಿ ತೆರೆಕಂಡ ರಾಮ್ ಚರಣ್ ಮತ್ತು ಮತ್ತು ಚಿರಂಜೀವಿ ಅಭಿನಯದ ‘ಆಚಾರ್ಯ’ 15.75 ಕೋಟಿ ರೂ. ಗಳಿಸಿತ್ತು.
Be the first to comment