ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ತ್ರಿಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿದೆ. ವೃದ್ಧಿ ಕ್ರಿಯೇಷನ್ಸ್ ಮತ್ತು ಸತೀಶ್ ಪಿಕ್ಚರ್ ಹೌಸ್ ನಿರ್ಮಿಸಿರುವ ಈ ಚಿತ್ರ ಬಿ ಸುರೇಶ್, ಅಚ್ಯುತ್ ಕುಮಾರ್ ಮತ್ತು ಸಂಪತ್ ಮೈತ್ರೇಯ ತಾರಾಬಳಗವನ್ನು ಹೊಂದಿದೆ.
‘ಅಶೋಕ ಬ್ಲೇಡ್’ ಚಿತ್ರದ ನಿರ್ದೇಶಕ ವಿನೋದ್ ದೊಂಡಾಲೆ ಅವರ ದುರಂತ ಮರಣದ ನಂತರ ಚಿತ್ರವನ್ನು ಕೈಬಿಡಲಾಗಿತ್ತು. ನಿರ್ಮಾಪಕರೊಂದಿಗೆ ಸತೀಶ್ ನೀನಾಸಂ ಅವರೇ ಮುಂದೆ ಹೆಜ್ಜೆ ಇಟ್ಟಿರುವುದರಿಂದ ಈ ಮಹತ್ವಾಕಾಂಕ್ಷೆಯ ಯೋಜನೆ ‘ಅಶೋಕ ಬ್ಲೇಡ್’ನಿಂದ ‘ದಿ ರೈಸ್ ಆಫ್ ಅಶೋಕ’ ಎಂದು ಶೀರ್ಷಿಕೆಯನ್ನು ಬದಲಿಸಿಕೊಂಡಿದೆ. ಸಂಕಲನಕಾರ ಮನು ಶೇಡ್ಗಾರ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಸುಮಾರು 80 ಪ್ರತಿಶತದಷ್ಟು ಕೆಲಸಗಳು ಪೂರ್ಣಗೊಂಡಿದ್ದು, ಇನ್ನುಳಿದ ಕೆಲಸವನ್ನು ಚಿತ್ರತಂಡ ಕೈಗೆತ್ತಿಕೊಳ್ಳಲಿದೆ.
‘ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದು ವಿನೋದ್ ಅವರ ಕನಸಾಗಿತ್ತು. ಅವರ ಕನಸನ್ನು ಗೌರವಿಸುವುದು ಮುಖ್ಯ ಎಂದು ನಾವು ಭಾವಿಸಿದ್ದೇವೆ. ಈ ಪಾತ್ರ ಈವರೆಗಿನ ನನ್ನ ವೃತ್ತಿಜೀವನದಲ್ಲಿ ನಾನು ಮಾಡಿದ ಪಾತ್ರಕ್ಕಿಂತ ಭಿನ್ನವಾಗಿದೆ. ಈ ವರ್ಷ ಜುಲೈ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡಲು ನಾವು ಸಿದ್ಧರಿದ್ದೇವೆ’ ಎನ್ನುತ್ತಾರೆ ನಟ ಸತೀಶ್ ನೀನಾಸಂ.
Be the first to comment