ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಗಳಿಕೆಯನ್ನು ಬೀಟ್ ಮಾಡುವ ಸನಿಹದಲ್ಲಿದೆ.
ಸದ್ಯ ‘ಮ್ಯಾಕ್ಸ್’ ಚಿತ್ರದ ಗಳಿಕೆ 40 ಕೋಟಿ ರೂಪಾಯಿ ಸಮೀಪಿಸಿದೆ. ‘ರಾಬರ್ಟ್’ ಚಿತ್ರ 2021ರಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್ನಲ್ಲಿ 50 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೇಳಿದ್ದರು. ಇನ್ನೊಂದು ವಾರದಲ್ಲಿ ‘ಮ್ಯಾಕ್ಸ್’ ಸಿನಿಮಾ ‘ರಾಬರ್ಟ್’ ಚಿತ್ರದ ಗಳಿಕೆಯನ್ನು ಹಿಂದಿಕ್ಕಲಿದೆ.
ದರ್ಶನ್ ನಟನೆಯ ಮತ್ತೊಂದು ಸೂಪರ್ ಹಿಟ್ ಚಿತ್ರ ‘ಕಾಟೇರ’ದ ಅಧಿಕೃತ ಕಲೆಕ್ಷನ್ 70 ಕೋಟಿ ರೂಪಾಯಿ ಇದೆ. ಇದನ್ನು ಹಿಂದಿಕ್ಕಲು ‘ಮ್ಯಾಕ್ಸ್’ ಚಿತ್ರಕ್ಕೆ ಅಸಾಧ್ಯ ಎಂದು ಹೇಳಲಾಗುತ್ತಿದೆ.
‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯನ್ನು ಈ ಚಿತ್ರ ಹೊಂದಿದೆ. ಪೊಲೀಸ್ ಠಾಣೆಯಲ್ಲಿ ನಡೆಯುವ ರಾಜಕಾರಣಿ ಮಕ್ಕಳ ಕೊಲೆ ಹಾಗೂ ಅದನ್ನು ಸುದೀಪ್ ಹೇಗೆ ನಿರ್ವಹಿಸುತ್ತಾರೆ ಎಂಬುದೇ ಚಿತ್ರದ ಕಥೆ. ಸಿನಿಮಾಗೆ ಕಲೈಪ್ಪುಲಿ ಧಾನು ಬಂಡವಾಳ ಹೂಡಿದರೆ ವಿಜಯ್ ಕರ್ತಿಕೇಯ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಮ್ಯಾಕ್ಸ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಂಕ್ರಾಂತಿವರೆಗೆ ದೊಡ್ಡ ಸಿನಿಮಾಗಳ ಹವಾ ಇಲ್ಲ. ಅಲ್ಲಿವರೆಗೆ ‘ಮ್ಯಾಕ್ಸ್’ ಚಿತ್ರದ ಅಬ್ಬರ ಮುಂದುವರಿಯಲಿದೆ.
Be the first to comment