ಶನಿವಾರ ಕಲಾವಿದರ ಸಂಘದಲ್ಲಿ ಟ್ರೈಲರ್ ನೋಡಿದವರು ಒಂದು ಕ್ಷಣ ಜರ್ಕ್ ಆದರು. ಅದು ಆಗಿದ್ದು ‘ಜರ್ಕ್’ ಸಿನಿಮಾದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ. ಮೆಟ್ರೋದಲ್ಲಿ ಕೆಲಸ ಮಾಡುತ್ತಾ ಅಂಶಕಾಲಿಕ ಸಮಯದಲ್ಲಿ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾಂತೇಶ್‍ಮದಕರಿ ಸಿನಿಮಾವನ್ನು ಬಣ್ಣಿಸಿದ ರೀತಿ ಹೀಗಿತ್ತು:
ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕೆಂದು ಮನಸ್ಸು ಯಾವಾಗಲೂ ಹೇಳುತ್ತಿತ್ತು. ಇದಕ್ಕಾಗಿ ಸಿನಿಮಾ ಮಾಡಬೇಕೆಂಬ ತುಡಿತವಿತ್ತು. 2500 ಕವಿತೆಗಳನ್ನು ಬರೆದಿರುವ ನನಗೆ ನಾಲ್ಕು ಗೆಳಯರು ನಿರ್ದೇಶಕನಾಗಬೇಕೆಂದು ಹುಮ್ಮಸ್ಸು ತಂದರು. ಗುರುಗಳಾದ ಜಯತೀರ್ಥ ಅವರಿಂದ ಚಿತ್ರರಂಗದ ವಿಭಾಗಗಳನ್ನು ಕಲಿತುಕೊಂಡೆ. ಇದಕ್ಕೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಪ್ರೋತ್ಸಾಹ ನೀಡಿದರು. ಸಿನಿಮಾದಲ್ಲಿ ಒಟ್ಟು 62 ದೃಶ್ಯಗಳು ಇರಲಿದ್ದು, ಪ್ರತಿಯೊಂದಕ್ಕೂ ಸಂದೇಶವಿರುತ್ತದೆ. ಎರಡು ಮೈನಸ್ ಸೇರಿದರೆ ಪ್ಲಸ್ ಆಗುತ್ತದೆ. ಅದೇ ರೀತಿ ಚಂದ್ರು-ಪ್ರದೀಪ್ ಮೈನಸ್ ಆಗಿದ್ದು ನಾನು ಪ್ಲಸ್ ಆಗಿರುವೆ. ಬೆಲ್ಲಿ ನೃತ್ಯವನ್ನು ಐಟಂ ಸಾಂಗ್‍ನಲ್ಲಿ ತ್ರಿಭುವನ್ ಮಾಸ್ಟರ್ ಚೆನ್ನಾಗಿ ಸಂಯೋಜಿಸಿ ಡ್ಯಾನ್ಸರ್ ಕಿರಣ್‍ಸಿಂಗ್ ಜೊತೆ ನನ್ನನ್ನು ಕುಣಿಸಿದ್ದಾರೆ. ಊರಿನಲ್ಲಿರುವ ಜನರಿಗೆ ಪಟ್ಟಣ ಸಳೆಯುತ್ತದೆ. ಇಲ್ಲಿಗೆ ಬಂದಾಗ ಏನೇನು ಆಗುತ್ತದೆ. ಮೊದಲರ್ಧ ಕೂಲ್ ಆಗಿ ಸಾಗಿದರೆ, ನಂತರ ಸೆಸ್ಪನ್ಸ್ ಆಗಿ ಕುತೂಹಲ ಹುಟ್ಟಿಸುತ್ತದೆ. ಬೆಂಗಳೂರು, ದೇವರಾಯನದುರ್ಗ, ಕುಲುಮನಾಲಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ.
ತುಣುಕುಗಳನ್ನು ನೋಡಿದಾಗ ನನಗೂ ಜರ್ಕ್ ಆಯಿತು ಅಂತಾರೆ ಸಾಹಿತಿ ಪ್ರೋ.ದೊಡ್ಡೆರಂಗೇಗೌಡ. ಐಎಎಸ್ ಓದಲು ಸಿಟಿಗೆ ಬರುವ ಬೀದರ್ ಮೂಲದ ಕೃಷ್ಣರಾಜ್ ಮತ್ತು ಶ್ರೀಮಂತ ಹುಡುಗನಾಗಿ ಸಚ್ಚಿನ್‍ಸಿದ್ದು ನಾಯಕರುಗಳು. ಸಮಾಜದ ಮೇಲೆ ಆಸಕ್ತಿ ಇರುವ ನಿತ್ಯಾರಾಜ್ ಹಾಗೂ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಶಿಕ್ಷಕಿಯಾಗಿ ಆಶಾಭಂಡಾರಿ ನಾಯಕಿಯರು. ಮೊದಲಬಾರಿ ದ್ವಿಪಾತ್ರದಲ್ಲಿ ಅಭಿನಯಿಸಿರುವ ಗಡ್ಡಪ್ಪ, ಗೆಳೆಯನಾಗಿ ಪವನ್‍ಕುಮಾರ್, ಪೇದೆಯಾಗಿ ಕುರಿರಂಗ. ಇವೆರೆಲ್ಲರಿಗೂ ಮೈಕ್ ತಲುಪಲಿಲ್ಲ. ನೆಲೆಮನೆರಾಘವೇಂದ್ರ-ಪಾಲ್ಸ್‍ನಾಗ ಸಾಹಿತ್ಯದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಎಡ್ವರ್ಡ್‍ಷಾ ಅವರಿಗೆ ಹೊಸ ಅನುಭವ. ಬೀದರ್‍ನ ರವಿ.ಕೆ ಮತ್ತು ಬಳ್ಳಾರಿಯ ನಾಗರತ್ನಕಂಬಳಿ ಜಂಟಿಯಾಗಿ ಹಣ ಹೂಡಿರುವ ಚಿತ್ರವು ಸದ್ಯದಲ್ಲೆ ಸೆನ್ಸಾರ್ ಅಂಗಳಕ್ಕೆ ಹೋಗಲಿದೆ.
ಕಾರ್ಯಕ್ರಮದಲ್ಲಿ ತಂಡಕ್ಕೆ ಶುಭ ಹಾರೈಸಲು ಲಹರಿವೇಲು, ಮೆಟ್ರೋ ಅಧಿಕಾರಿಗಳು ಹಾಜರಿದ್ದರು.
Pingback: Digital transformation company
Pingback: sex dolls for men for sale