ಎಲ್ಲವು ಸರಿಯಾಗಿ ಇದ್ದು ನಟಿಸುವುದೇ ಕಷ್ಟ. ಆದರೆ ‘ಜಕಣಾಚಾರಿ ಅವನ ತಮ್ಮ ಶುಕ್ಲಚಾರಿ’ ಎನ್ನುವ ಚಿತ್ರದಲ್ಲಿ ಇಬ್ಬರು ವಿಕಲಚೇತನ ಮಕ್ಕಳು ಅಭಿನಯಿಸಿರುವುದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊದಲು ಎನ್ನಬಹುದಾಗಿದೆ. ಚಾಮರಾಜನಗರದ ಮಹೇಶ್ ಕುರುಡನಾಗಿ ಶುಕ್ಲಚಾರಿ, ಬೆಂಗಳೂರಿನ ಜಯ್ಯದ್ ಎರಡು ಕಾಲುಗಳ ಇಲ್ಲದ ಜಕಣಾಚಾರಿ. ಸಿನಿಮಾ ಕುರಿತು ಹೇಳುವುದಾದರೆ ಪ್ರಪಂಚದಲ್ಲಿ ದುಡ್ಡು ಇರೋರು ಏನು ಬೇಕಾದರೂ ಮಾಡಿ ತೋರಿಸಬಹುದು. ಚೆನ್ನಾಗಿರುವವರು ಸಾಧಿಸಿ ಜೀವನಶೈಲಿಯಲ್ಲಿ ಬದಲಾಗಬಹುದು. ಇವೆಲ್ಲವುಗಳನ್ನು ಬದಿಗಿಟ್ಟು ನೋಡಿದರೆ ವಿಕಲಚೇತನ ಮಕ್ಕಳ ದೇಹ ಸ್ಪಂದಿಸುವುದಿಲ್ಲ. ಆದರೂ ಅವರ ಮನಸ್ಸು ಧೈರ್ಯ ಕೊಡುತ್ತೆ. ಹಾಗೆಯೇ ಇಬ್ಬರು ಹುಡುಗರು ಹಳ್ಳಿಯಿಂದ ಪಟ್ಟಣಕ್ಕೆ ಬದುಕು ಸಾಗಿಸಲು ಬರುತ್ತಾರೆ. ಶುರುವಿನಲ್ಲಿ ಸೈಕಲ್ ಹೊಡೆದು ನಂತರ ನಾವು ಎಲ್ಲರಂತೆ ಈ ರೀತಿ ಬದುಕಬಹುದೆಂದು ತೋರಿಸುವುದೇ ಒಂದು ಏಳೆಯ ಕತೆಯಾಗಿದೆ.
ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಕಾಲಿನ ತೊಂದರೆಯಿಂದ ಬ್ಯಾಂಡೇಜ್ ಹಾಕಿಕೊಂಡಿದ್ದ ನಿರ್ದೇಶಕ ರಾಜಾರವಿವರ್ಮ ಖುಷಿಯಿಂದ ಹೆಚ್ಚು ವಿಷಯವನ್ನು ಹಂಚಿಕೊಂಡರು. ಮೂಲತ: ಚಿತ್ರಕಲಾವಿದನಾಗಿದ್ದು, ಬದುಕಿಗಾಗಿ ಹಲವರಲ್ಲಿ ಸಹಾಯಕ ನಿರ್ದೇಶನ ಮಾಡುತ್ತಿದ್ದೆ. ಆಗ ಹೊಳೆದಿದ್ದೆ ಕತೆ ಬರೆಯಲು ಸ್ಪೂರ್ತಿ ಬಂತು. ಕಾನ್ಪಿಡಾ ಶಾಲೆಯಲ್ಲಿರುವಾಗ ಡಾ.ವಿ.ನಾಗೇಂದ್ರಪ್ರಸಾದ್ ಗುರುಗಳು ಆಗಿದ್ದರು. ಅವರು ನಿರ್ಮಾಪಕರನ್ನು ಹುಡುಕಿಕೊಟ್ಟರು. ಮುಂದೆ ಡ್ರಾಮ ಜ್ಯೂನಿಯರ್ಸ್ ಮಕ್ಕಳನ್ನು ಆಯ್ಕೆ ಮಾಡಲು ಚಿಂತನೆ ನಡೆಸಲಾಗಿತ್ತು. ಪಾತ್ರಕ್ಕೆ ನೈಜ ಮಕ್ಕಳು ಅವಶ್ಯವಾಗಿರುವುದರಿಂದ ಇಬ್ಬರು ಆಯ್ಕೆಯಾದ ಬಗೆಯನ್ನು ವಿವರವಾಗಿ ಬಿಚ್ಚಿಟ್ಟರು.
ಮಾದ್ಯಮದ ಮುಂದೆ ಮಾತನಾಡಲು ಅವಕಾಶ ಮಾಡಿಕೊಟ್ಟ ನಿರ್ಮಾಪಕಿ ಜಯಶ್ರೀದೇವಿ ಸಾವು ನೋವು ತಂದಿದೆ. ಅವರ ನಿರ್ಮಾಣದ ಶ್ರೀಮಂಜುನಾಥ ಸುದ್ದಿಗೋಷ್ಟಿಯಲ್ಲಿ ಮೈಕ್ ಕೊಟ್ಟಾಗ ಭಯದಿಂದ ಏನು ಹೇಳಬೇಕೆಂದು ತಿಳಿಯಲಿಲ್ಲ. ಶಿಷ್ಯ ಜಾಸ್ತಿ ಮಾತನಾಡಿದ್ದು ಸೋಜಿಗ ಅನಿಸಿದೆ. ನಿರ್ಮಾಪಕರು ಗೆಳಯರಾಗಿದ್ದು ಅವರ ತಂದೆ-ತಾಯಿ ಅಂಗವಿಕಲರಾಗಿದ್ದಾರೆ. ಅದರಿಂದಲೇ ಹಣ ಹೂಡಲು ಮುಂದೆ ಬಂದರು. ತಂಡಕ್ಕೆ ಒಳ್ಳೆಯದಾಗಲಿ ಎಂದು ಐದು ಹಾಡುಗಳಿಗೆ ಸಾಹಿತ್ಯ ರಚಿಸಿರುವ ಡಾ.ವಿ.ನಾಗೇಂದ್ರಪ್ರಸಾದ್ ಹೇಳಿದರು.
ದೇಹದಲ್ಲಿ ಸಮಸ್ಯೆ ಇರುವವರ ಬಗ್ಗೆ ಅಯ್ಯೋ ಅನ್ನುವ ಬದಲು, ಇವರುಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಚಿತ್ರಕ್ಕೆ ಬಹುಶ: ಪ್ರಶಸ್ತಿ ಸಿಗುವ ಲಕ್ಷಣಗಳು ಇವೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಭವಿಷ್ಯ ನುಡಿದರು.
ಕಲಾವಿದರಾದ ಮೂಗುಸುರೇಶ್, ಗಿರೀಶ್‍ಜಟ್ಟಿ, ಮೀನಾಕ್ಷಿ ಪಾತ್ರದ ಪರಿಚಯ ಮಾಡಿಕೊಂಡರು. ನಿರ್ಮಾಪಕ ಹೆಚ್.ಸೋಮಶೇಖರ್ ಇಬ್ಬರು ಮಕ್ಕಳು ನಟಿಸಿದ್ದು ಕಾರ್ಯಕ್ರಮದಲ್ಲಿ ಹಾಜರಿದ್ದರು. ಆಡಿಯೋ ಬಿಡುಗಡೆಯು ನಾಲ್ಕು ಬಾರಿ ಮುಂದೂಡಿ, ಶುಕ್ರವಾರ ಅನ್ನದಾತರ ಹುಟ್ಟುಹಬ್ಬವಾಗಿದ್ದರಿಂದ ಅಂದೇ ಹಾಡುಗಳು ಹೊರಬಂದಿದ್ದು ವಿಶೇಷವಾಗಿತ್ತು.
Pingback: drinking game