ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂ ಮೆಟ್ಟಿಲೇರಲು ಪೊಲೀಸರಿಗೆ ಗೃಹ ಇಲಾಖೆಯಿಂದ ಅನುಮತಿ ಕಡತ ಸಿಕ್ಕಿದೆ.
ಪೊಲೀಸರು ಡಿಸೆಂಬರ್ 31 ಅಥವಾ ಜನವರಿ 1ರಂದು ದರ್ಶನ್ ಜಾಮೀನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದಾರೆ.
ಬಂಧನದ ಬಳಿಕ ದರ್ಶನ್ ಬೆನ್ನುನೋವಿನ ಚಿಕಿತ್ಸೆಗೆ ಮಧ್ಯಂತರ ಜಾಮೀನು ಪಡೆದಿದ್ದರು. ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದ ಹೈಕೋರ್ಟ್ ನಿರ್ಭಂಧಗಳನ್ನು ವಿಧಿಸಿತ್ತು. ಬಳಿಕ ನಟ ದರ್ಶನ್ಗೆ ಹೈಕೋರ್ಟ್ ನಿಂದ ಜಾಮೀನು ಸಿಕ್ಕಿತ್ತು.
ಜಾಮೀನು ಸಿಕ್ಕ ಬಳಿಕ ಮೈಸೂರಿಗೆ ಹೋಗಲು ಕೋರ್ಟ್ ಅನುಮತಿ ಪಡೆದಿದ್ದ ದರ್ಶನ್ ಅಲ್ಲಿಯೇ ಇದ್ದರು. ಜನವರಿ 5 ರವರೆಗೂ ಅನುಮತಿ ಪಡೆದಿರುವ ದರ್ಶನ್ ಮೈಸೂರಿನಲ್ಲಿ ಫಾರ್ಮ್ ಹೌಸ್ನಲ್ಲಿದ್ದಾರೆ. ಹೊಸ ವರ್ಷದ ದಿನವೇ ದರ್ಶನ್ ಗೆ ಶಾಕ್ ಕೊಡಲು ಮುಂದಾದ ಪೊಲೀಸರಿಗೆ ಇಂದು ಗೃಹ ಇಲಾಖೆಯಿಂದ ಸುಪ್ರೀಂಗೆ ಅರ್ಜಿ ಸಲ್ಲಿಸಲು ಅನುಮತಿ ಸಿಕ್ಕಿದೆ.
ಪೊಲೀಸರಿಗೆ ಕಡತ ರವಾನೆ ಮಾಡಿದ ಗೃಹ ಇಲಾಖೆ, ಈ ಮೂಲಕ ಸುಪ್ರೀಂ ಮೆಟ್ಟಿಲೇರಲು ಅನುಮತಿಸಿದೆ. ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂ ಮೋರೆ ಹೋಗಲು ಪೊಲೀಸರು ರೆಡಿಯಾಗಿದ್ದಾರೆ.
—-
Be the first to comment