ಪುಷ್ಪ 2’ ಸಿನಿಮಾದ ಶೆಖಾವತ್ಗೆ ಸವಾಲು ಹಾಕುವ ಹಾಡಿಗೆ ಕತ್ತರಿ ಹಾಕಲಾಗಿದೆ.
‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ನ್ನು ಹಿಡಿಯಲು ಶೆಖಾವತ್ ಒಬ್ಬ ಬಹಳ ಪ್ರಯತ್ನ ಪಡುತ್ತಿರುತ್ತಾನೆ. ಶೆಖಾವತ್ಗೆ ಸವಾಲು ಹಾಕುವ ಪುಷ್ಪ ‘ದಮ್ಮಿದ್ರೆ ನನ್ನ ಅರೆಸ್ಟ್ ಮಾಡೊ ಶೆಖಾವತ್’ ಎಂದು ಹಾಡು ಹೇಳುತ್ತಾ ಸವಾಲು ಹಾಕುವ ದೃಶ್ಯವಿದೆ. ಅಲ್ಲು ಅರ್ಜುನ್ ಬಂಧನ ಬಳಿಕ ನಡೆದ ವಿವಾದಗಳ ಬಳಿಕ ಆ ಹಾಡನ್ನು ಚಿತ್ರತಂಡ ಕತ್ತರಿಸಿದೆ. ಸಿನಿಮಾದ ಮೂಲಕ ಯಾರನ್ನೂ ಪ್ರಚೋದಿಸುವುದು ಬೇಡ ಎಂಬ ನಿರ್ಣಯಕ್ಕೆ ಬಂದು ಚಿತ್ರತಂಡ ಹಾಡನ್ನುತೆಗೆದಿದೆ.
ಒಂದೇ ದಿನದಲ್ಲಿ ಜಾಮೀನಿನ ಮೇಲೆ ಅಲ್ಲು ಅರ್ಜುನ್ ಹೊರ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಾಡು ವೈರಲ್ ಆಗುತ್ತಿದೆ. ಪೊಲೀಸರನ್ನು, ಆಂಧ್ರ ಸಿಎಂ ನ್ನು ಕಿಚಾಯಿಸಲು ಆ ಹಾಡನ್ನು ಅಲ್ಲು ಅರ್ಜುನ್ ಅಭಿಮಾನಿಗಳು ಬಳಸುತ್ತಿದ್ದರು. ಇದೇ ಕಾರಣಕ್ಕೆ ಆ ಹಾಡನ್ನು ಚಿತ್ರತಂಡ ತೆಗೆದು ಹಾಕಿದೆ. ಸಿನಿಮಾದಲ್ಲಿ ಪೊಲೀಸರಿಗೆ ಅವಮಾನ ಆಗುವ ದೃಶ್ಯಗಳು ಇವೆ. ಆದರೆ ಅವುಗಳನ್ನು ತೆಗೆಯಲಾಗಿಲ್ಲ.
ಅಲ್ಲು ಅರ್ಜುನ್ ಜಾಮೀನಿನ ಮೇಲೆ ಹೊರ ಬಂದರೂ ಆ ನಂತರವೂ ಅಲ್ಲು ಅರ್ಜುನ್ ನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ಅಲ್ಲು ಮನೆ ಮೇಲೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದರು. ‘ಪುಷ್ಪ 2’ ಸಿನಿಮಾ ದೊಡ್ಡ ಹಿಟ್ ಆಗಿದೆ. ಆದರೆ ಸಿನಿಮಾದ ಯಶಸ್ಸನ್ನು ಎಂಜಾಯ್ ಮಾಡುವ ಸ್ಥಿತಿಯಲ್ಲಿ ಅಲ್ಲು ಅರ್ಜುನ್ , ಚಿತ್ರತಂಡ ಇಲ್ಲವಾಗಿದೆ.
Be the first to comment