ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಬಿಡುಗಡೆ ಬೆನ್ನಲ್ಲೇ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಆರಂಭವಾಗಿದೆ.
ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಡುತ್ತಿದ್ದು, ಸುದೀಪ್ ಅಭಿಮಾನಿಗಳು ಭರ್ಜರಿಯಾಗಿ ಚಿತ್ರವನ್ನು ಸ್ವೀಕರಿಸಿದ್ದಾರೆ. ಇದೇ ಖುಷಿಯಲ್ಲಿ ಸುದೀಪ್ ಆಪ್ತರು ನೀಡಿದ ಪಾರ್ಟಿ ವಿವಾದಕ್ಕೆ ಕಾರಣವಾಗಿದೆ.
ಪಾರ್ಟಿಯಲ್ಲಿ ಸಕ್ಸಸ್ ಖುಷಿಗಾಗಿ ಕೇಕ್ ನ್ನು ಕತ್ತರಿಸಲಾಗಿತ್ತು. ಆದರೆ ಇದೇ ಕೇಕ್ ವಿವಾದದ ಕೇಂದ್ರಬಿಂದುವಾಗಿದೆ. ಕೇಕ್ ಮೂಲಕ ಮ್ಯಾಕ್ಸ್ ಚಿತ್ರತಂಡದ ಸಂಭ್ರಮದಲ್ಲಿ ಪರೋಕ್ಷವಾಗಿ ದರ್ಶನ್ಗೆ ಟಾಂಗ್ ಕೊಡಲಾಗಿದೆ ಅನ್ನೋ ಚರ್ಚೆ ಶುರುವಾಗಿದೆ. ಕೇಕ್ ಮೇಲೆ ‘ಬಾಸಿಸಂ ಕಾಲ ಮುಗಿತು… ಮ್ಯಾಕ್ಸ್ ಮ್ಯಾಕ್ಸಿಸಂ’ ಎಂದು ಬರೆಸಿ ಮ್ಯಾಕ್ಸ್ ಚಿತ್ರ ತಂಡ ಸಂಭ್ರಮಿಸಿತ್ತು. ಈ ಸಾಲುಗಳೇ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ಗೆ ಕಾರಣವಾಗಿದೆ.
ಈ ಸಾಲುಗಳನ್ನು ನೋಡಿದ ಫ್ಯಾನ್ಸ್ ಬಾಸಿಸಂ ಕಾಲ ಮುಗಿತು ಅನ್ನೋದನ್ನ ನಟ ದರ್ಶನ್ಗೆ ಉಲ್ಲೇಖಿಸಲಾಗಿದೆ ಎಂದು ಟೀಕಿಸಿದ್ದಾರೆ. ಉದ್ದೇಶಪೂರ್ವಕವಾಗಿ ಹೀಗೆ ಬರೆಸಿ ಟಾಂಗ್ ಕೊಡಲಾಗಿದೆ ಎನ್ನುತ್ತಿದ್ದಾರೆ.
ಕೇಕ್ ವಿಚಾರ ವೈರಲ್ ಆಗುತ್ತಲೇ ಈ ಕುರಿತು ಕಿಚ್ಚ ಸುದೀಪ್ ಆಪ್ತ ನಟ ಪ್ರದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಬಾಸಿಸಂ ಕಾಲ ಮುಗಿತು ಅನ್ನೋ ಪದ ಕೇಕ್ ಮೇಲೆ ಬರೆಸಿದ್ದು ನಾನೇ. ಆದರೆ ಯಾವ ನಟನಿಗೂ ಟಾಂಗ್ ಕೊಟ್ಟಿದ್ದಲ್ಲ. ಇದು ಮ್ಯಾಕ್ಸ್ ಸಿನಿಮಾದ ಹಾಡಿನ ಸಾಲು. ಬಾಸ್ ಅನ್ನೋದು ಯಾವೊಬ್ಬ ನಟನಿಗೆ ಮೀಸಲಾಗಿಲ್ಲ. ಪ್ರತಿಯೊಬ್ಬ ನಟನಿಗೂ ಸಪರೇಟ್ ಅಭಿಮಾನಿಗಳು ಇದ್ದಾರೆ ಎಂದು ಹೇಳಿದ್ದಾರೆ.
ಅವರಿಗೆ ಇಷ್ಟ ಬಂದಂತೆ ಅವರು ಸಂಭ್ರಮಿಸುತ್ತಾರೆ. ಬಾಸ್ ಅನ್ನೋದು ಯಾವ ಒಬ್ಬ ನಾಯಕ ನಟನಿಗೆ ಸೀಮಿತವಲ್ಲ. ಅಭಿಮಾನಿಗಳು ತಮ್ಮ ನಾಯಕ ನಟನನ್ನ ಹೇಗೆ ಬೇಕಾದರೂ ಕರೆಯಬಹುದು. ಅನವಶ್ಯಕವಾಗಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದ್ದಾರೆ.
Be the first to comment