ಲಾಭದಲ್ಲಿ ಕೆಮಿಸ್ಟ್ರೀ ಆಫ್ ಕರಿಯಪ್ಪ

ಸಾಮಾನ್ಯವಾಗಿ ನಿರ್ಮಾಪಕರು ಬಿಡುಗಡೆ ಸಂದರ್ಭದಲ್ಲಿ ದುಗುಡದಲ್ಲಿ ಇರುತ್ತಾರೆ. ಆದರೆ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಸ್ಯ ಚಿತ್ರದ ನಿರ್ಮಾಪಕ ಡಾ.ಮಂಜುನಾಥ್.ಡಿಎಸ್ ಬಿಡುಗಡೆ ಮುಂಚೆ ಲಾಭದಲ್ಲಿದ್ದೇನೆಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಅವರು ಹೇಳುವಂತೆ ಮಂಡ್ಯಾ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಆಧಾರಿತ ಕತೆಯಲ್ಲಿ ಅಪ್ಪ, ಅಮ್ಮ, ಮಗ, ಸೊಸೆ ನಾಲ್ಕು ಜನರ ಸುತ್ತ ಕತೆ ಸಾಗುತ್ತದೆ. ಎರಡನೆ ಬಾರಿ ನಿರ್ಮಾಣಮಾಡಿ ವಕೀಲ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಖುಷಿ ತಂದಿದೆ. ಸಿನಿಮಾವು ಕಾಮಿಡಿ, ಭಾವನೆಗಳು, ವಿಚಾರ ಇರಲಿದೆ. ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ ಯುಎ ಪ್ರಮಾಣ ಪತ್ರ ನೀಡಿದ್ದಾರೆ. ನಾಲ್ಕು ವಿತರಕರು ತುಣುಕುಗಳನ್ನು ನೋಡಿ ತಾವಾಗಿಯೇ ಮುಂದೆ ಬಂದು ಬಿಡುಗಡೆ ಮಾಡಲು ಆಸಕ್ತಿ ತೋರಿಸಿದ್ದಾರೆ. ವಾಹಿನಿ, ಡಿಜಿಟಲ್ ಹಕ್ಕುಗಳು ಉತ್ತಮ ಬೆಲೆಗೆ ನೀಡಲಾಗಿದೆ ಎನ್ನುತ್ತಾರೆ,

ಬಣ್ಣ ಕಪ್ಪು ಇರುವುದೇ ವರವಾಯಿತು. ಅದಕ್ಕೆ ಕರಿಯಪ್ಪನಾಗಿ ನಟಿಸಲು ಅವಕಾಶ ಸಿಕ್ಕಿತ್ತು. ಹಳ್ಳಿ ಮನೆಯಲ್ಲಿ ನಡೆಯುವುದನ್ನು ಪಾತ್ರವಾಗಿ ತೋರಿಸಲಾಗಿದೆ. ಚಿಕ್ಕ ಸಂಸಾರದಲ್ಲಿ ಅರ್ಥ ಮಾಡಿಕೊಂಡರೆ ಬದುಕು ಸುಲಭ. ಎಲ್ಲರಿಗೂ ಸಮಸ್ಯೆ ಇರುತ್ತದೆ. ಜಗಳವಾಡದೆ ಸಮಂಜಸವಾಗಿ ಮಾತನಾಡಿದರೆ ಕಷ್ಟಗಳು ಬಗೆ ಹರಿಯುತ್ತೆ. ಮಾತೇ ಬಂಡವಾಳ ಆಗಿದೆ. ಮಕ್ಕಳನ್ನು ಲೋಕ ಜ್ಘಾನ ಇಲ್ಲದೆ ಬೆಳಸಿದರೆ, ಮುಂದೆ ತಂದೆಯಾದವನ ಕರ್ತವ್ಯ ಏನಾಗುತ್ತದೆ. ಅದನ್ನು ತಿದ್ದಿ ಸರಿದಾರಿಗೆ ತರುವ ಮನೆಯ ಯಜಮಾನನಾಗಿ ನಟನೆ ಮಾಡಿದ್ದೇನೆಂದು ತಬಲನಾಣಿ ವಿವರಣೆ ನೀಡಿದರು. ಇವರ ಪತ್ನಿಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ. 35 ವರ್ಷದ ಯುವಕನ ಮನಸ್ಸು ಸಮಾಜದ ಮೇಲೆ ಹೇಗೆ ಕಾಣಿಸುತ್ತದೆ. ಮೊದಲ ಬಾರಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲಾಗಿದೆ ಎಂಬುದು ಚಂದನ್‍ಆಚಾರ್ ನುಡಿಯಾಗಿತ್ತು.
ಹಳ್ಳಿ ಹುಡುಗಿಯಾಗಿ ಪಟ್ಟಣದಲ್ಲಿ ಕಾಲ್‍ಸೆಂಟರ್‍ದಲ್ಲಿ ಕೆಲಸ ಮಾಡುತ್ತಿರುತ್ತೇನೆ. ಮದುವೆಯಾದ ಹುಡುಗ ಗಂಡಸು ಅಲ್ಲವೋ ಎಂಬ ಗೊಂದಲದಲ್ಲಿ ಇರುತ್ತೇನೆ. ಇದರಿಂದ ಸಂಸಾರ ಒಡೆದುಹೋದಾಗ ಮಾವ ಹೇಗೆ ಅದನ್ನು ಸರಿಪಡಿಸುತ್ತಾರೆ. ಪ್ರಸಕ್ತ ಹೆಣ್ಣು ಮಕ್ಕಳಿಗೆ ತೂಕದ ಸಂದೇಶವನ್ನು ಹೇಳಿರುವುದು ಹೈಲೈಟ್ ಆಗಿದೆ ಅಂತ ನವನಾಯಕಿ ಸಂಜನಾಆನಂದ್ ಹೇಳಿಕೊಂಡರು.

ಚಿತ್ರೀಕರಣ ಸಂದರ್ಭದಲ್ಲಿ ಡಬ್ ಸೌಂಡ್‍ನೊಂದಿಗೆ ಡಬ್ಬಿಂಗ್ ಮಾಡಲಾಗಿದೆ. ಕಳೆದ ತಿಂಗಳು ಟ್ರೈಲರ್ ಬಿಡುಗಡೆಯಾಗಿದ್ದು 10 ಲಕ್ಷ ಜನರು ವೀಕ್ಷಿಸಿದ್ದಾರೆ. ತಂದೆ-ಮಗನ ಬಾಂದವ್ಯದಲ್ಲಿ ಕರಿಯಪ್ಪನಾದವನು ಸಂಸಾರಕೋಸ್ಕರ ಯಾವ ರೀತಿ ಜವಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ಸಂಭಾಷಣೆಗಳೇ ಜೀವಾಳವಾಗಿದೆ. ಸರಳ-ಸುಂದರ-ಸಾಂಸಾರಿಕ ಚಿತ್ರ. ಸಕರಾತ್ಮಕ ಕ್ಲೈಮಾಕ್ಸ್‍ನೊಂದಿಗೆ ಶುಭ ಕಾಣುತ್ತದೆಂದು ಬಣ್ಣನೆ ಮಾಡಿಕೊಂಡಿದ್ದು ನಿರ್ದೇಶಕ ಕುಮಾರ್.

ಇದೇ ಶುಕ್ರವಾರದಂದು ಸುಮಾರು 50 ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆ ಅಂತ ವಿತರಕ ವಿಜಯ್ ಮಾತಿನೊಂದಿಗೆ ಸುದ್ದಿಗೋಷ್ಟಿಯು ಸಮಾಪ್ತಿ ಆಯಿತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!