ತನ್ನ ಟೈಟಲ್ ನಿಂದ ಸದ್ದು ಮಾಡುತ್ತಿರುವ ಫಾರೆಸ್ಟ್ ಚಿತ್ರದ ಪೈಸಾ ಪೈಸಾ ರೇ ಹಾಡು ಬಿಡುಗಡೆಯಾಗಿದೆ.
ಈ ಹಾಡಿಗೆ ಧರ್ಮ ವಿಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಭರ್ಜರಿ ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಹಾಡಿಗೆ ದನಿ ನೀಡಿದ್ದಾರೆ. ಬಿಡುಗಡೆಗೆ ಆಗಿರುವ ಹಾಡಿನಲ್ಲಿ ರಂಗಾಯಣ ರಘು, ಚಿಕ್ಕಣ್ಣ, ಅನೀಶ್ ತೇಜಸ್ವ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.
ಪುನೀತ್ ಆರ್ಯ ಬರೆದಿರುವ ಓಡೋ ಓಡು ಎಂಬ ಹಾಡು ಈ ಹಿಂದೆ ಬಿಡುಗಡೆಯಾಗಿ ವೈರಲ್ ಆಗಿದೆ. ಮೂರುವರೆ ಮಿಲಿಯನ್ ನಷ್ಟು ಜನರು ಈ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ.
ಎನ್ಎಂಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್ ಎಂ ಕಾಂತರಾಜ್ ಅವರು ವಿಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಸೆನ್ಸಾರ್ ಪ್ರಕ್ರಿಯೆ ನಡೆದಿದೆ. ಚಂದ್ರಮೋಹನ್ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ.
ಉಪಾಧ್ಯಕ್ಷ ಖ್ಯಾತಿಯ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ಬಹುತೇಕ ಕಥೆ ಕಾಡಿನಲ್ಲಿ ನಡೆಯುತ್ತದೆ. ಮುಂದಿನ ವರ್ಷ ಜನವರಿ 24ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
Be the first to comment