ನವ ಕರ್ನಾಟಕ ಚಲನಚಿತ್ರೋತ್ಸವ ಅಕಾಡೆಮಿ ಹಾಗೂ ಯುನಿವರ್ಸಲ್ ಫೀಲಂ ಕೌನ್ಸಿಲ್ ಆಯೋಜಿಸಿರುವ ನಾಲ್ಕನೇಯ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024 ದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ “ಬೆಸ್ಟ್ ಆಕ್ಟರ್” ಅವಾರ್ಡ ನೀಡಲಾಯಿತು.
ಡಿಸೆಂಬರ್ 15/2024 ರವಿವಾರ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಎಸ್ಸಾಟೋ ರೀ ಕ್ರಿಯೇಷನ್ ಹಬ್ ನಲ್ಲಿ ಜರುಗಿದ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ದೇಶಕ ಎಂ ಎ ಮುಮ್ಮಿಗಟ್ಟಿ, ಹಿರಿಯ ಕಲಾವಿದ ಸುಂದರ ರಾಜ್, ಆಂಧ್ರಪ್ರದೇಶ ಫೀಲಂ ಚೆಂಬರ್ ಅಧ್ಯಕ್ಷ ಅಂಬಾಟಿ ಮಧು ಮೋಹನ ಕೃಷ್ಣ, ನಿರ್ಮಾಪಕ ಕಲ್ಮೇಶ ಹಾವೇರಿಪೇಟ, ಅವರು ವಿಶ್ವಪ್ರಕಾಶ ಮಲಗೊಂಡ ಅವರಿಗೆ ಅತ್ಯುತ್ತಮ ನಟನೆಂದು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ಚಲನಚಿತ್ರೋತ್ಸವದ ಸ್ಪರ್ಧೆಯಲ್ಲಿ ವಿಶ್ವಪ್ರಕಾಶ ನಟಿಸಿ ನಿರ್ದೇಶಿಸಿರುವ “ತುಷಾರ್” ಚಿತ್ರವೂ ಸಹ ಭಾಗವಹಿಸಿತ್ತು. ಸುಮಾರು 150 ಕ್ಕೂ ಹೆಚ್ಚು ಚಲನಚಿತ್ರಗಳು ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದವು.
ಈ ಹಿಂದೆಯೂ ಈ ಚಿತ್ರಕ್ಕೆ ಎರಡು ಪ್ರಶಸ್ತಿ ಲಭಿಸಿದ್ದವು.
ವೇದಿಕೆ ಮೇಲೆ ಕೆಜಿಎಫ್ ಸಿನಿಮಾ ಸಾಹಿತ್ಯ ರಚನೆಕಾರ ಹಾಗೂ ನಿರ್ದೇಶಕ ಕಿನ್ನಾಳ ರಾಜ, ದಿಲೀಪ್ ಕುಮಾರ್, ಜಮ್ಮು ಕಾಶ್ಮಿರ ಜಯೇಶ ಗುಪ್ತಾ, ಪ್ರಭುರಾಮ ರೆಡ್ಡಿ, ಸುಪರಸ್ಟಾರ್ ಸಂಪಾದಕ ಅಸ್ಲಾಂ, ಆನಂದ ಗುಪ್ತಾ, ನಿರ್ದೇಶಕ ನಿರ್ಮಾಪಕ ಸುನೀಲ್ ಕುಮಾರ್, ಹಿರಿಯ ಕಲಾವಿದರು, ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು, ಉದ್ದಿಮೆದಾರರು ಸೇರಿದಂತೆ ಇನ್ನಿತರರು ಇದ್ದರು. ವಿಶ್ವನಾಥ ಪಲ್ಲೇದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Be the first to comment