ನಮ್ಮ ಪ್ರೇಮ

‘ನಮ್ಮ ಪ್ರೇಮ’ ವಿಡಿಯೋ ಆಲ್ಬಂ ಬಿಡುಗಡೆ

ಚಿಕ್ಕಂದಿನಿಂದಲೂ ಸಂಗೀತ, ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿರುವ ಪ್ರೀತಿ ಅಶೋಕ್ ಈವರೆಗೂ ಸಾಕಷ್ಟು ಕವನಗಳನ್ನು ರಚಿಸಿದ್ದಾರೆ ಹಾಗೂ ಹಾಡಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಮಾಧುರ್ಯದ ಕಂಠದ ಮೂಲಕ ಮನೆಮಾತಾಗಿರುವ ಗಾಯಕ ವಿಜಯ್ ಪ್ರಕಾಶ್ ಅವರ ಜೊತೆಗೆ “ಈ ಏಳು ಸ್ವರದಂತೆ ನಮ್ಮ ಪ್ರೇಮವು” ಎಂಬ ಪ್ರೇಮಗೀತೆಯನ್ನು ಹಾಡಿದ್ದಾರೆ. ಹಲವು ಜನಪ್ರಿಯ ಚಿತ್ರಗಳಿಗೆ ಹಾಗೂ ವಿಡಿಯೋ ಆಲ್ಬಂ ಗಳಿಗೆ ಸಂಗೀತ ಸಂಯೋಜಿಸಿರುವ ಗಿರಿಧರ್ ದಿವಾನ್ “ನಮ್ಮ ಪ್ರೇಮ” ವಿಡಿಯೋ ಆಲ್ಬಂ ಗೂ ಸಂಗೀತ ನೀಡಿದ್ದಾರೆ. ಜೊತೆಗೆ ವಿಡಿಯೋ ಚಿತ್ರೀಕರಣ ಹಾಗೂ ಸಂಕಲನದ ಜವಾಬ್ದಾರಿ ಕೂಡ ಗಿರಿಧರ್ ದಿವಾನ್ ಅವರದೆ. ಪ್ರೀತಿ ಅಶೋಕ್ ಅವರೆ ಈ ಮಂಜುಳ ಯುಗಳ ಗೀತೆಯನ್ನು ಬರೆದಿದ್ದಾರೆ. ಅಶೋಕ್ ಭಟ್ ಅವರು ನಿರ್ಮಾಣ ಮಾಡಿದ್ದಾರೆ.

ಬಾಲ್ಯದಿಂದಲೂ ಸಂಗೀತವನ್ನು ಅತಿಯಾಗಿ ಪ್ರೀತಿಸುವ ನಾನು “ನಮ್ಮ ಪ್ರೇಮ” ಎಂಬ ವಿಡಿಯೋ ಆಲ್ಬಂ ನಲ್ಲಿ “ಈ ಏಳು ಸ್ವರದಂತೆ ನಮ್ಮ ಪ್ರೇಮವು” ಎಂಬ ಹಾಡನ್ನು ದೇಶ ಕಂಡ ಅದ್ಭುತ ಗಾಯಕ ವಿಜಯ್ ಪ್ರಕಾಶ್ ಅವರ ಜೊತೆಗೆ ಹಾಡಿರುವುದು ಖುಷಿಯಾಗಿದೆ. ಅದರಲ್ಲೂ ನಾನು ಬರೆದಿರುವ ಹಾಡನ್ನು ವಿಜಯ್ ಪ್ರಕಾಶ್ ಅವರು ಹಾಡಿರುವುದು ಇನ್ನೂ ಖುಷಿಯಾಗಿದೆ. ಈ ಸುಮಧುರ ಹಾಡಿಗೆ ಅಷ್ಟೇ ಸುಮಧುರ ಸಂಗೀತ ನೀಡಿರುವ ಗಿರಿಧರ್ ದಿವಾನ್ ಹಾಗೂ ವಿಜಯ್ ಪ್ರಕಾಶ್ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಪ್ರೀತಿ ಅಶೋಕ್ ಮ್ಯೂಸಿಕ್ ಚಾನಲ್ ನಲ್ಲಿ ಈಗಾಗಲೇ ಬಿಡುಗಡೆಯಾಗಿರುವ “ನಮ್ಮ ಪ್ರೇಮ” ವಿಡಿಯೋ ಆಲ್ಬಂ ಅನ್ನು ಹೆಚ್ಚು ಜನರು ವೀಕ್ಷಿಸುವ ಮೂಲಕ ನಮಗೆ ಪ್ರೋತ್ಸಾಹ ನೀಡಿ ಎಂದು ಸಾಹಿತಿ ಹಾಗೂ ಗಾಯಕಿ ಪ್ರೀತಿ ಅಶೋಕ್‌ ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!