ಮೈಸೂರು ಮೂಲದ ನಿರ್ದೇಶಕ ನಾಗಭೂಷಣ ದೇಶಪಾಂಡೆ ಅವರ ಚೊಚ್ಚಲ ಕಿರುಚಿತ್ರ ‘ಬೇರ ಹುಡುಕಿದ ಮರ’ ಇಂಡೋನೇಷ್ಯಾದಲ್ಲಿ ನಡೆಯುವ 19 ನೇ ಜೋಗ್ಜಾ-ನೆಟ್‌ಪಾಕ್ ಏಷ್ಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಲೈಟ್ ಆಫ್ ಏಷ್ಯಾ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.
ನವೆಂಬರ್ 30 ರಿಂದ ಡಿಸೆಂಬರ್ 7 ರವರೆಗೆ ಇಂಡೋನೇಷ್ಯಾದಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ‘ಬೇರ ಹುಡುಕಿದ ಮರ’ ಚಿತ್ರವು ಪಿತೃಪ್ರಭುತ್ವದ ಆದರ್ಶಗಳನ್ನು ಪ್ರಶ್ನಿಸುವ ಗುರಿ ಹೊಂದಿದೆ.ಸಮಾಜದಲ್ಲಿ ಮೌನವಾಗಿರುವವರಿಗೆ ಧ್ವನಿಯನ್ನು ನೀಡುತ್ತದೆ ಎಂದಿದ್ದಾರೆ ನಾಗಭೂಷಣ ದೇಶಪಾಂಡೆ.
13 ವರ್ಷದ ರೋಹಿತ್ ತನ್ನ ಮುರಿದ ಕುಟುಂಬದ ಸವಾಲುಗಳನ್ನು ಪರಿಶೋಧಿಸುತ್ತಾನೆ. ಕಿರುಚಿತ್ರ ವಿಷಕಾರಿ ಪುರುಷತ್ವ, ಮಹಿಳೆಯರಿಗೆ ಕಡಿಮೆ ಸ್ಥಾನಮಾನ ಕುರಿತು ವಿವರಿಸುತ್ತದೆ ಮತ್ತು ಲಿಂಗ ಪಾತ್ರಗಳ ಬಗ್ಗೆ ಮಗುವಿನ ತಿಳುವಳಿಕೆಯನ್ನು ಜಾಗೃತಗೊಳಿಸುತ್ತದೆ. ಕಥೆಯು ಆಳವಾಗಿ ಕಾಡುತ್ತದೆ.
‘ಬೇರ ಹುಡುಕಿದ ಮರ’ ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರೋತ್ಸವ 2024 ರಲ್ಲಿ ಪ್ರಥಮ ಪ್ರದರ್ಶನವಾಗಿದೆ. ಇದು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆ ಪಡೆದಿದೆ. ದೆಹಲಿಯ ಯೆಲ್ಲೊಸ್ಟೋನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ.
ಇದೇ ಮೊದಲ ಬಾರಿಗೆ ಕನ್ನಡ ಕಿರುಚಿತ್ರ ಪ್ರತಿಷ್ಠಿತ ಇಂಡೋನೇಷ್ಯಾ ಚಿತ್ರೋತ್ಸ ಸ್ಪರ್ಧೆಗೆ ಆಯ್ಕೆಯಾಗಿದೆ.
Be the first to comment