ಚಿತ್ರ: ಜೀಬ್ರಾ
ನಿರ್ದೇಶನ: ಈಶ್ವರ್ ಕಾರ್ತಿಕ್
ತಾರಾಗಣ: ಧನಂಜಯ, ಸತ್ಯದೇವ, ಪ್ರಿಯ ಭವಾನಿ ಶಂಕರ್, ಗರುಡಾ ರಾಮ್ ಇತರರು
ರೇಟಿಂಗ್: 3.5/5
ಬ್ಯಾಂಕ್ ಒಳಗೆ ನಡೆಯುವ ರಾಬರಿ ಕಥೆಯನ್ನು ಹೇಳುವ ಚಿತ್ರ ಈ ವಾರ ತೆರೆಗೆ ಬಂದಿರುವ ‘ ಜೀಬ್ರಾ’.
ಚಿತ್ರದಲ್ಲಿ ಬ್ಯಾಂಕ್ ಒಳಗೆ ಇರುವ ಉದ್ಯೋಗಿ ತನ್ನ ಬುದ್ಧಿಶಕ್ತಿಯಿಂದ ಬ್ಯಾಂಕ್ ಲಾಕರ್ ನ ಹಣವನ್ನು ಯಾವ ರೀತಿ ದೋಚುತ್ತಾನೆ ಎನ್ನುವ ಕಥೆ ಇದೆ. ಇದರ ಜೊತೆಗೆ ಬ್ಯಾಂಕಿನ ಒಳಗಡೆ ನಡೆಯುವ ಹಣಕಾಸು ನಿರ್ವಹಣೆಯ ಕೆಲಸಗಳ ಚಿತ್ರಣ ಇಲ್ಲಿದೆ.
ಖಾಸಗಿ ಬ್ಯಾಂಕಿನ ಅಧಿಕಾರಿಯಾಗಿ ಸತ್ಯದೇವ ಕಾಣಿಸಿಕೊಂಡಿದ್ದಾರೆ. ಈತನ ಪ್ರೇಯಸಿ ಪ್ರಿಯ ಭವಾನಿ ಶಂಕರ್ ಅದೇ ಬ್ಯಾಂಕಿನಲ್ಲಿ ಉದ್ಯೋಗಿ. ಸತ್ಯದೇವ ಮಾಡುವ ಒಂದು ಚಿಕ್ಕ ತಪ್ಪು ಯಾವ ರೀತಿ ಗ್ಯಾಂಗ್ ಸ್ಟರ್ ಧನಂಜಯ ಕೆಂಗಣ್ಣಿಗೆ ಗುರಿಯಾಗುತ್ತದೆ. ಅದರಿಂದ ಸತ್ಯದೇವ ಯಾವ ರೀತಿ ಹೊರಗೆ ಬರುತ್ತಾನೆ ಎನ್ನುವುದನ್ನು ತಿಳಿಯಲು ಚಿತ್ರವನ್ನು ನೋಡಬೇಕಿದೆ.
ಧನಂಜಯ ಚಿತ್ರದಲ್ಲಿ ಆದಿ ಮತ್ತು ಡಾಲಿ ಎನ್ನುವ ಎರಡು ಶೇಡ್ ಪಾತ್ರವನ್ನು ಮಾಡಿದ್ದಾರೆ. ಗ್ಯಾಂಗ್ ಸ್ಟರ್ ಗೆ ಬೇಕಾಗುವ ಗತ್ತನ್ನು ನಿರ್ದೇಶಕರು ಚೆನ್ನಾಗಿ ತೋರಿಸಿದ್ದಾರೆ. ಸತ್ಯದೇವ ಲವಲವಿಕೆಯಿಂದ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಅವರು ಒಂದಷ್ಟು ಹಾಸ್ಯದ ಮೂಲಕ ನಗಿಸುವ ಯತ್ನವನ್ನು ಮಾಡಿದ್ದಾರೆ.
ನಾಯಕಿ ಪಾತ್ರದಲ್ಲಿ ಪ್ರಿಯ ಭವಾನಿ ಶಂಕರ್ ತಮಗೆ ಸಿಕ್ಕಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ
. ಕನ್ನಡದ ನಟಿ ಅಮೃತ ಅಯ್ಯಂಗಾರ್ ಒಂದು ಹಾಡು ಎರಡು ಸೀನ್ ಗಳಿಗೆ ಸೀಮಿತ ಆಗಿದ್ದಾರೆ.
ಚಿತ್ರದಲ್ಲಿ ಬ್ಯಾಂಕ್ ವ್ಯವಸ್ಥೆಯ ಬಗ್ಗೆ ಒಂದಷ್ಟು ಹೇಳಲಾಗಿದೆ. ಚಿತ್ರದ ಕ್ಯಾಮರಾ ವರ್ಕ್ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ಪಾತ್ರದಲ್ಲಿ ಕನ್ನಡದ ಕಳ್ಳ ನಟ ಗರುಡಾ ರಾಮ್ ಅವರು ಗಮನ ಸೆಳೆಯುತ್ತಾರೆ.
Be the first to comment