ರಂಗನಾಥ್ ನಿರ್ದೇಶನದ 'ಪ್ರಭುತ್ವ'

Prabhutva Movie Review: ನಾಯ್ಯ ,ಅನ್ಯಾಯದ ರೋಷದ ಕಥೆ ‘ಪ್ರಭುತ್ವ’

ಚಿತ್ರ: ಪ್ರಭುತ್ವ
ನಿರ್ಮಾಣ: ರವಿರಾಜ್‍ ಕುಮಾರ್
ತಾರಾಗಣ: ಚೇತನ್‍ ಚಂದ್ರ, ಪಾವನ ಗೌಡ, ವೀಣಾ ಸುಂದರ್‍, ಶರತ್‍ ಲೋಹಿತಾಶ್ವ, ಆದಿ ಲೋಕೇಶ್‍, ಅಭಿರಾಮಿ, ನಾಜರ್ ಮುಂತಾದವರು.
ರೇಟಿಂಗ್: 3/5

ರಂಗನಾಥ್ ನಿರ್ದೇಶನದ ‘ಪ್ರಭುತ್ವ’ ಚಿತ್ರವು ಸಮಾಜದ ಹಲವು ಅಂಶಗಳನ್ನು ತನ್ನದೇ ಆದ ಶೈಲಿಯಲ್ಲಿ ಬಿಂಬಿಸುತ್ತಾ ಪ್ರೇಕ್ಷಕರನ್ನು ತಲುಪಿದೆ. ಒಬ್ಬ ಸಾಮಾನ್ಯ ಮೆಕ್ಯಾನಿಕ್ ಮನು ಕ್ರಾಂತಿಕಾರಿಯಾಗಿ ರೂಪಾಂತರಗೊಂಡು ಸಮಾಜವನ್ನು ಬದಲಾಯಿಸುವ ಹಂಬಲದೊಂದಿಗೆ ಹೊರಟ ಹೋರಾಟದ ಕಥೆಯನ್ನು ಚಿತ್ರವು ಹೇಳುತ್ತದೆ.

ಸಿನಿಮಾವು ಪ್ರಾರಂಭದಿಂದ ಅಂತ್ಯದವರೆಗೂ ಒಂದು ಭಾಷಣದಂತೆ ಸಾಗುತ್ತದೆ. ರೋಷಾವೇಷದ ಡೈಲಾಗ್‌ಗಳು ಸಿನಿಮಾದ ಪ್ರಮುಖ ಆಕರ್ಷಣೆ. ನ್ಯಾಯ, ಅನ್ಯಾಯ, ಶೋಷಣೆ ಇತ್ಯಾದಿ ಸಮಾಜದ ಸಮಸ್ಯೆಗಳನ್ನು ತೆರೆದಿಟ್ಟು ಚರ್ಚಿಸುವ ಪ್ರಯತ್ನ ಚಿತ್ರದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.

ನಾಯಕನ ಜೊತೆಗಿರುವ ತಾಯಿಯ ಪಾತ್ರ ಮತ್ತು ಕೆಕೆ ಎಂಬ ದುಷ್ಟನೊಂದಿಗಿನ ಸಂಘರ್ಷವು ಕಥೆಗೆ ಹೆಚ್ಚಿನ ಆಳವನ್ನು ನೀಡಿದೆ. ಭರ್ಜರಿ ಫೈಟ್ ಸನ್ನಿವೇಶಗಳು ಮತ್ತು ಬುಲೆಟ್‌ನಂಥ ಡೈಲಾಗ್‌ಗಳು ಸಿನಿಮಾದಲ್ಲಿ ಇವೆ.

ಚೇತನ್‍ ಚಂದ್ರ ದೃಶ್ಯ ದೃಶ್ಯದಲ್ಲೂ ಅವರ ಶ್ರಮ ಕಾಣಿಸುತ್ತದೆ. ಅದಕ್ಕೆ ಪೂರಕವಾದ ಗಟ್ಟಿ ಮತ್ತು ನಟನೆಗೆ ಅವಕಾಶವಿರುವಂತಹ ಕಥೆಯ ಅವಶ್ಯಕತೆ ಇತ್ತು. ಪಾವನಾ ಗೌಡಗೆ ಹೆಚ್ಚು ಕೆಲಸವಿಲ್ಲ. ಚಿತ್ರದಲ್ಲಿ ಪ್ರತಿಭಾವಂತ ತಂಡವೇ ಇದೆ. ಅವಿನಾಶ್, ‘ಸಿದ್ಲಿಂಗು’ ಶ್ರೀಧರ್, ನಾಜರ್, ಅಂಬಿಕಾ, ರೂಪಾದೇವಿ, ಹರೀಶ್‍ ರೈ, ಮುನಿ, ಶರತ್‍ ಲೋಹಿತಾಶ್ವ ಮುಂತಾದ ನಟ-ನಟಿಯರು ಇದ್ದಾರೆ. ಆದರೆ, ಯಾರಿಗೂ ಅವರ ಪ್ರತಿಭೆ ತೋರಿಸುವ ಅವಕಾಶ ಸಿಕ್ಕಿಲ್ಲ. ಚಿತ್ರದಲ್ಲಿ ಭಾಷಾಣದ ಅಬ್ಬರ ಹೆಚ್ಚಿರುವುದರಿಂದ, ಅದರ ಮಧ್ಯೆ ತಾಂತ್ರಿಕ ಅಂಶಗಳು ಗಮನಕ್ಕೆ ಬರುವುದೆ ಕಡಿಮೆ.

ಒಟ್ಟಾರೆಯಾಗಿ, ‘ಪ್ರಭುತ್ವ’ ಚಿತ್ರವು ಸಮಾಜದ ಬಗ್ಗೆ ಚಿಂತಿಸುವ ಪ್ರತಿಯೊಬ್ಬರನ್ನು ತಲುಪುವ ಚಿತ್ರವಾಗಿದೆ. ಸಿನಿಮಾದ ಕೆಲವು ಭಾಗಗಳು ಭಾವನಾತ್ಮಕವಾಗಿ ಕಟ್ಟಿಕೊಳ್ಳುತ್ತಿದ್ದರೆ, ಇನ್ನೂ ಕೆಲವು ಭಾಗಗಳು ಪ್ರೇಕ್ಷಕರನ್ನು ಯೋಚನೆಗೆ ಹುರಿದುಂಬಿಸುತ್ತವೆ. ಸಮಾಜದ ಬದಲಾವಣೆಗೆ ಹೋರಾಡುವ ಯುವಜನತೆಗೆ ಈ ಚಿತ್ರವು ಪ್ರೇರಣೆಯಾಗಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!