ಚಿತ್ರ: ಲವ್ ರೆಡ್ಡಿ
ನಿರ್ದೇಶನ: ಸ್ಮರಣ ರೆಡ್ಡಿ
ತಾರಾಗಣ: ಅಂಜನ್, ರಾಮಚಂದ್ರ, ಶ್ರಾವಣಿ, ಎನ್ ಟಿ ರಾಮಸ್ವಾಮಿ, ಜ್ಯೋತಿ ಮದನ್ ಇತರರು
ರೇಟಿಂಗ್: 3.5/5
ಆಂಧ್ರ ಗಡಿ ಭಾಗದಲ್ಲಿ ನಡೆಯುವ ನವಿರಾದ ಕಾಡುವ ಪ್ರೇಮ ಕಥೆ ಈ ವಾರ ತೆರೆಗೆ ಬಂದಿರುವ ಲವ್ ರೆಡ್ಡಿ ಚಿತ್ರ.
ತೆಲುಗಿನಲ್ಲಿ ಬಿಡುಗಡೆಗೊಂಡು ಯಶಸ್ಸು ಕಂಡ ಈ ಚಿತ್ರ ಈಗ ಕನ್ನಡದಲ್ಲಿ ಬಿಡುಗಡೆಗೊಂಡಿದೆ. ತೆಲುಗು ಸಿನಿಮಾವಾದರೂ, ಚಿತ್ರದಲ್ಲಿ ಬಹುತೇಕ ಕನ್ನಡದ ಕಲಾವಿದರು ನಟಿಸಿದ್ದಾರೆ. ಹೀಗಾಗಿ ಚಿತ್ರ ಕನ್ನಡಿಗರಿಗೆ ಹತ್ತಿರವಾಗುತ್ತದೆ.
ಬಸ್ಸಿನಲ್ಲಿ ಓಡಾಡುವ ಯುವಕನಿಗೆ ಅಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಅಲ್ಲಿಂದ ಪ್ರೇಮ ಕಥೆ ಶುರು ಆಗುತ್ತದೆ. ಮದುವೆಗೆ ಒತ್ತಡ, ಕೆಲಸದ ಓಡಾಟ ಇವೆಲ್ಲವುಗಳ ನಡುವೆ ಕಥೆ ದ್ವಿತೀಯಾರ್ಧಕ್ಕೆ ತಲುಪುತ್ತದೆ. ಈ ವೇಳೆ ಹೊಸ ತಿರುವನ್ನು ಸಿನಿಮಾ ಪಡೆದುಕೊಳ್ಳುತ್ತದೆ. ಅಂತಿಮವಾಗಿ ಗಾಢವಾದ ಮೌನವೊಂದು ಚಿತ್ರದಲ್ಲಿ ಉಳಿದು ಹೋಗುತ್ತದೆ.
ಈ ಪ್ರೇಮ ಕಥೆ ಪ್ರೇಕ್ಷಕರಿಗೆ ಕನೆಕ್ಟ್ ಆಗುವಂತೆ ರೂಪಿತಗೊಂಡಿದೆ. ಚಿತ್ರದಲ್ಲಿ ಆಂಧ್ರ ಗಡಿಭಾಗದ ಕನ್ನಡವನ್ನು ಬಳಕೆ ಮಾಡಲಾಗಿದೆ. ಭಾಷೆಯ ಬಳಕೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಸಂಭಾಷಣೆಯ ಮೂಲಕ ವರದರಾಜ ಚಿಕ್ಕಬಳ್ಳಾಪುರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
ಪ್ರೇಮ ಕಥೆಗಳನ್ನು ಇಷ್ಟಪಡುವವರಿಗೆ ಲವ್ ರೆಡ್ಡಿ ಇಷ್ಟವಾಗುವ ಸಾಧ್ಯತೆ ಇದೆ. ಕಲಕುವ ಪ್ರೇಮ ಕಥೆಯಾಗಿ ಇದು ನೆನಪಿನಲ್ಲಿ ಉಳಿಯುತ್ತದೆ.
Be the first to comment