ಡಾಲಿ ಧನಂಜಯ್

ಡಾಲಿ ಧನಂಜಯ್-ಸತ್ಯದೇವ್ ಸಿನಿಮಾಗೆ ವಿಜಯ್ ಕುಮಾರ್ ಸಾಥ್

ಕನ್ನಡದ ಡಾಲಿ ಧನಂಜಯ್ ಹಾಗೂ ತೆಲುಗಿನ ಸತ್ಯದೇವ್ ನಟನೆಯ ಜೀಬ್ರಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ 22ಕ್ಕೆ ಮಲ್ಟಿಸ್ಟಾರ್ಸ್ ಹಾಗೂ ಬಹುಭಾಷಾ ಚಿತ್ರ ಜೀಬ್ರಾ ತೆರೆಗೆ ಬರ್ತಿದೆ. ಹೀಗಾಗಿ ಡಾಲಿ ಹಾಗೂ ಸತ್ಯದೇವ್ ಅಂತಿಮ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನ ಮಾಲ್ ವೊಂದರಲ್ಲಿ ನಿನ್ನೆ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಇವೆಂಟ್ ಗೆ ಮುಖ್ಯ ಅತಿಥಿಗಳಾಗಿ ದುನಿಯಾ ವಿಜಯ್ ಕುಮಾರ್, ಸತೀಶ್ ನೀನಾಸಂ, ಸಪ್ತಮಿ ಗೌಡ, ನಾಗಭೂಷಣ್ ಭಾಗವಹಿಸಿದ್ದರು.

ನಟ ದುನಿಯಾ ವಿಜಯ್ ಕುಮಾರ್, ಡಾಲಿ, ಇಲ್ಲಿ ಒಂದಷ್ಟು ಜನ ನನ್ನ ತಮ್ಮಂದಿರು ಇದ್ದಾರೆ. ಧನಂಜಯ್ ಬಗ್ಗೆ ಅಪಾರವಾದ ಗೌರವಿದೆ. ತಾನು ಬೆಳೆದು ತನ್ನವವರನ್ನು ಬೆಳೆಯುಸುತ್ತಾರೆ. ಧನಂಜಯ್ ಬಂದ ರೂಟ್, ಸ್ಟ್ರಗಲ್, ಅವರು ಮನಸ್ಸು ನನಗೆ ಇಷ್ಟ. ಸಲಗದಲ್ಲಿ ಮುಖ್ಯ ಪಾತ್ರ ಮಾಡಿ ನನಗೆ ಗೆಲುವು ತಂದು ಕೊಟ್ಟಿದ್ದಾರೆ. ಸತ್ಯದೇವ್ ಕಷ್ಟುಪಟ್ಟು ದೊಡ್ಡ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಸಿನಿಮಾಗೆ ಭಾಷೆ ಇಲ್ಲ. ಎಷ್ಟು ಖುಷಿ, ನೋವು ಹಂಚಿಕೊಳ್ಳುತ್ತೇವೆ. ಜೀಬ್ರಾ ನಮ್ಮ ಕನ್ನಡದ ಸಿನಿಮಾ, ಎಲ್ಲಾ ಕಡೆ ದೊಡ್ಡ ಮಟ್ಟಕ್ಕೆ ಆಗಲಿ ಎಂದರು.

ಡಾಲಿ ಧನಂಜಯ್

ಡಾಲಿ ಧನಂಜಯ್, ಕನ್ನಡ ವರ್ಷನ್ ಸಿನಿಮಾಗಳನ್ನು ನೀವು ಹೆಚ್ಚಾಗಿ ನೋಡುವುದರಿಂದ ಡಿಮ್ಯಾಂಡ್ ಕ್ರಿಯೇಟ್ ಆಗುತ್ತದೆ. ಬೈಕೊಂಡು ಕುರುವುದರಿಂದ ಯಾವುದು ಆಗುವುದಿಲ್ಲ. ಪಕ್ಕ ಕನ್ನಡ ಸಿನಿಮಾ ಎನಿಸಲು ಶಶಾಂಕ್ ಅಂಡ್ ಟೀಂ ತುಂಬಾ ಚೆನ್ನಾಗಿ ಡಬ್ ಮಾಡಿದ್ದಾರೆ. ಜೀಬ್ರಾ ಇದೇ ನವೆಂಬರ್ 22ಕ್ಕೆ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.

ಸತ್ಯದೇವ್, ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ದಿನಗಳನ್ನು ನೆನಪಿಸಿಕೊಂಡ ದಿನಗಳ ಬಗ್ಗೆ ಮೆಲುಕು ಹಾಕಿ, ಇದೇ 22ಕ್ಕೆ ಜೀಬ್ರಾ ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲ ಸಿನಿಮಾ ಮೇಲೆ ಇರಲಿದೆ ಎಂದರು.

ಜೀಬ್ರಾ ಚಿತ್ರದಲ್ಲಿ ಡಾಲಿ ಧನಂಜಯ್ ಆದಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕೆ ಒಳ್ಳೆ ಸ್ಕೋಪ್ ಇದೆ. ಇನ್ನೂ ಸತ್ಯದೇವ್ ಕೂಡ ಮತ್ತೊಬ್ಬ ಹೀರೋ ಆಗಿ ಅಭಿನಯಿಸಿದ್ದಾರೆ. ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್ ಇನ್ನೀತರರು ತಾರಾಬಗಳದಲ್ಲಿದ್ದಾರೆ. ಕೆಜಿಎಫ್ ಮತ್ತು ಸಲಾರ್ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ.

ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡಿದ್ದಾರೆ. ಎಸ್ ಶ್ರೀಲಕ್ಷ್ಮಿ ರೆಡ್ಡಿ ಸಹ ಚಿತ್ರದ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ, ಮೀರಾಖ್ ಸಂಭಾಷಣೆ ಸಿನಿಮಾಗಿದೆ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ ಈ ಸಿನಿಮಾವನ್ನು ಎಸ್‌ ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಿಸಿದ್ದಾರೆ. ರವಿ ಬಸ್ರೂರು ಸಂಗೀತ ಈ ಸಿನಿಮಾಕ್ಕಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಜೀಬ್ರಾ ಸಿನಿಮಾಗೆ ಈಶ್ವರ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!