ಓಡಾಡೋಕೆ ಸಿಕ್ಕಿದೆ ಹೊಸ ದಾರಿ : Flytripnow.com

– ಪರಮಶಿವಯ್ಯ ಮಾಲೀಕರು
(ಎಲ್.ವಿ.ಟೂರ್‌ಸ್‌ ಆಂಡ್ ಟ್ರಾವೆಲ್ಸ್ ಟ್ರಾವೆಲ್ಸ್ ಕಂಪನಿ)

ಮದುವೆಗಳಲ್ಲಿ ಎರಡು ವಿಧ ಒಂದು ಅರೇಂಜ್ಡ್ ಮ್ಯಾರೇಜ್, ಇನ್ನೊಂದು ಲವ್ ಮ್ಯಾರೇಜ್. ಲವ್ ಮ್ಯಾರೇಜ್ ಆದ್ರೆ ಎಲ್ಲ ರಿಸ್ಕೂ ನಮ್ಮ ಮೇಲೇ ಇರುತ್ತೆ. ಆದರೆ ಅದೇ ಅರೇಂಜ್ಡ್ ಮ್ಯಾರೇಜ್ ಆದ್ರೆ ನಮ್ಮ ಕಷ್ಟ ಸುಖ ನೋಡೋಕೆ ಸಂಬಂಧಿಕರು ಇರ್ತಾರೆ. ಈ ತತ್ವ ಕೇವಲ ಮದುವೆಗಳಿಗೆ ಮಾತ್ರ ಅಪ್ಲೈ ಆಗಲ್ಲ, ಇವತ್ತಿನ ನಮ್ಮ ಜೀವನದ ಎಲ್ಲ ವಿಷಯಗಳಲ್ಲೂ ಈ ಅರೇಂಜ್ ಮೆಂಟ್ ಅನ್ನೋದು ತೀರಾ ಮುಖ್ಯ ಆಗಿದೆ. ಒಂದು ಟ್ರಿಪ್ ಹೋಗಬೇಕು ಅಂದ್ರೆ ನಾವೇ ಹೊರಟರೆ ದಾರಿಯಲ್ಲಿ ನಾನಾ ಸಮಸ್ಯೆಗಳು ಎದುರಾಗಬಹುದು, ಆದರೆ ಅದೇ ಒಂದು ಕಂಪನಿ ಮೂಲಕ ಟ್ರಿಪ್ ಹೋದರೆ ಎಲ್ಲಾ ಅರೇಂಜ್ಡ್ ಮಾಡೋದ್ರಿಂದ ನಾವು ನೆಮ್ಮದಿಯಾಗಿ ನಮ್ಮ ಟ್ರಿಪ್ ಅನ್ನು ಎಂಜಾಯ್ ಮಾಡಬಹುದು. ಅದು ಕೇವಲ ಟ್ರಿಪ್ ಗಳಿಗೆ ಮಾತ್ರ ಸೀಮಿತ ಆಗಲ್ಲ. ನಮಗೆ ಇಂದಿನ ದಿನಗಳಲ್ಲಿ ಬೇಕಾದ ಎಲ್ಲಾ ವಿಷಯಗಳಲ್ಲೂ ಈ ತರಹದ ಅರೇಂಜರ್ ಕಂಪನಿಗಳು ತೀರಾ ಸಹಾಯ ಮಾಡುತ್ತವೆ. ನಮ್ಮ ಅನೇಕ ಅವಶ್ಯಕತೆಗಳನ್ನು ಅರೇಂಜ್ ಮಾಡೋ ಇಂತಹದೊಂದು ಕಂಪನಿ ಅಂದ್ರೆ ಫ್ಲೈ ಟ್ರಿಪ್ ನೌ ಡಾಟ್ ಕಾಮ್.

ಈ ತರಹದ ಅನೇಕ ಟ್ರಾವೆಲ್ ಏಜೆನ್ಸಿಗಳು ಮತ್ತು ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಗಳು ಇವೆಯಲ್ಲಾ, ಇದರಲ್ಲಿ ಏನು ವಿಶೇಷ ಅಂತ ನೀವು ಕೇಳಬಹುದು. ಅದಕ್ಕೆ ಇಲ್ಲಿದೆ ನೋಡಿ ಉತ್ತರ. ಎಲ್ಲ ಕಂಪನಿಯ ಕೆಲಸಗಳಿಗೂ ಜನ ಹೇಗೆ ರಿಯಾಕ್ಟ್ ಮಾಡ್ತಾರೆ ಅನ್ನೋದರ ಮೇಲೆ ಅವುಗಳ ಸಕ್ಸಸ್ ನಿಂತಿರುತ್ತದೆ. ಹಾಗೆ ನೋಡಿದರೆ ಪ್ರಪಂಚದ ಅತಿ ದೊಡ್ಡ ಬ್ರ್ಯಾಂಡ್ ಗಳ ಇಂತಹ ಕಂಪನಿಗಳ ವಿಷಯದಲ್ಲಿ ಶೇಕಡಾ 30ರಷ್ಟು ಜನ ಅಸಮಾಧಾನ ಹೊಂದಿರುತ್ತಾರೆ. ಆದರೆ ಫ್ಲೈ ಟ್ರಿಪ್ ನೌ ಕಂಪನಿಯ ಬಗ್ಗೆ ದೂರು ಹೇಳುವ ಗ್ರಾಹಕರ ಸಂಖ್ಯೆ ಕೇವಲ ಶೇಕಡಾ ಒಂದರಷ್ಟು ಮಾತ್ರ ಅಂದ್ರೆ ಈ ಕಂಪನಿ ಎಷ್ಟರ ಮಟ್ಟಿಗೆ ತನ್ನ ಗ್ರಾಹಕರ ಬಗ್ಗೆ ಕೇರ್ ಮಾಡುತ್ತದೆ ಅನ್ನೋದನ್ನು ನೀವೇ ಊಹಿಸಬಹುದು.

ಫ್ಲೈ ಟ್ರಿಪ್ ನೌ ಕಂಪನಿಗೆ ಪ್ರಪಂಚದಾದ್ಯಂತ ಗ್ರಾಹಕರಿದ್ದಾರೆ. ನಮ್ಮ ದೇಶದಿಂದ ಹೊರಗೆ ಹೋಗುವವರು, ಅಲ್ಲಿಂದ ಇಲ್ಲಿಗೆ ಬರುವವರು ಎಲ್ಲರಿಗೂ ಫ್ಲೈ ಟ್ರಿಪ್ ನೌ ಕಂಪನಿ ಅಂದ್ರೆ ಅಚ್ಚು ಮೆಚ್ಚು. ಯಾಕಂದ್ರೆ ಫ್ಲೈ ಟ್ರಿಪ್ ನೌ ಕಂಪನಿ ತನ್ನ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಸೇವೆಯನ್ನು ಒದಗಿಸುತ್ತದೆ. ಹಾಗಂತೆ ಕ್ವಾಲಿಟಿ ವಿಷಯದಲ್ಲಿ ಕಾಂಪ್ರೊಮೈಸ್ ಆಗಬೇಕಾಗುತ್ತೆ ಅಂತ ನೀವಂದುಕೊಂಡರೆ ಅದು ತಪ್ಪು. ಫ್ಲೈ ಟ್ರಿಪ್ ನೌ ಕಂಪನಿ ತನ್ನ ವಿಶ್ವದರ್ಜೆಯ ಸೇವೆಗೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಹನಿಮೂನ್ ಪ್ಯಾಕೇಜುಗಳಿಂದ ಹಿಡಿದು, ಕಾರ್ಪೊರೇಟ್ ಮೀಟಿಂಗ್ ಗಳು, ಎಂಪ್ಲಾಯಿ ಮೋಟಿವೇಷನ್ ಪ್ರೋಗ್ರಾಮ್ ಗಳು, ವರ್ಕ್ ಶಾಪ್ ಗಳು, ಅಂತರಾಷ್ಟ್ರೀಯ ವ್ಯವಹಾರ ಮೇಳಗಳ ವಿಸಿಟ್ , ಅವಾರ್ಡ್ ಪ್ರೋಗ್ರಾಮ್ ಗಳನ್ನು ಆಯೋಜಿಸುವುದನ್ನು ಈ ಕಂಪನಿ ಮಾಡುತ್ತದೆ. ಅದಲ್ಲದೆ ಫಾರಿನ್ ಕಂಪನಿಗಳ ರಾಯಭಾರಿಗಳ ಜೊತೆ ಮಾತುಕತೆ ಮತ್ತು ಆ ಸಮಯದಲ್ಲಿ ಭಾಷಾಂತರ ತಜ್ಞರನ್ನು ಏರ್ಪಾಡು ಮಾಡುವ ಕೆಲಸವನ್ನೂ ಈ ಕಂಪನಿ ಸಮರ್ಥವಾಗಿ ಮಾಡುತ್ತದೆ. ಫ್ಲೈಟ್, ಫ್ಲೈಟ್ ಮತ್ತು ಹೊಟೇಲ್, ಬಸ್ ವ್ಯವಸ್ಥೆ, ಹಾಲಿಡೇಸ್ ಪ್ರೋಗ್ರಾಮ್ ಹೀಗೆ ಎಲ್ಲದರಲ್ಲೂ ನಿಮಗೆ ಬೇಕಾದ ಫ್ಲೆಕ್ಸಿಬಲ್ ಆಯ್ಕೆಗಳು ಈ ಕಂಪನಿಯಲ್ಲಿ ಲಭ್ಯ. ಕ್ಯಾನ್ಸಲೇಷನ್ ಮತ್ತು ರೀಫಂಡ್ ಗಳ ವಿಚಾರಗಳಲ್ಲೂ ಫ್ಲೈ ಟ್ರಿಪ್ ನೌ ಕಂಪನಿ ಫ್ಲೆಕ್ಸಿಬಲ್ ಆಗಿದೆ. ಅಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ಪ್ರೋಮೋಕೋಡ್ ಗಳು, ಕಾಲ ಕಾಲಕ್ಕೆ ವಿಶೇಷ ಸಮಯಗಳಲ್ಲಿ ಡಿಸ್ಕೌಂಟ್ ಗಳೂ ಲಭ್ಯವಿವೆ.

ಒಟ್ಟಿನಲ್ಲಿ ಇಂದು ಚಾಲ್ತಿಯಲ್ಲಿರುವ ದೊಡ್ಡ ದೊಡ್ಡ ಕಂಪನಿಗಳ ಟ್ರಾವೆಲ್ ಮತ್ತು ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಗಳಿಗೆ ಹೋಲಿಸಿದರೆ ದರ ಮತ್ತು ಸೇವೆಯಲ್ಲಿ ಫ್ಲೈ ಟ್ರಿಪ್ ನೌ ಕಂಪನಿ ಎಷ್ಟೇ ಮೆಟ್ಟಿಲು ಮೇಲಿದೆ. ಹಾಗಾಗಿಯೇ ಫ್ಲೈ ಟ್ರಿಪ್ ನೌ ಕಂಪನಿಗೆ ಅಷ್ಟೊಂದು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಪ್ರಪಂಚದ ಶೇಕಡಾ 90ರಷ್ಟು ಹೊಟೇಲುಗಳಲ್ಲಿ ತಮ್ಮ ಗ್ರಾಹಕರಿಗೆ ತಂಗಲು ವ್ಯವಸ್ಥೆ ಮಾಡಿಕೊಡುವಷ್ಟು ಸಾಮರ್ಥ್ಯ ಹೊಂದಿರುವ ಫ್ಲೈ ಟ್ರಿಪ್ ನೌ ಕಂಪನಿ ಗ್ರಾಹಕರ ಅಚ್ಚು ಮೆಚ್ಚಿನ ಕಂಪನಿ ಆಗಿರುವುದರಲ್ಲಿ ಯಾವ ಸಂದೇಹವೂ ಇಲ್ಲ.

This Article Has 1 Comment
  1. Pingback: playing cornhole

Leave a Reply

Your email address will not be published. Required fields are marked *

Translate »
error: Content is protected !!