ಆಸ್ಕರ್‌ಗೆ ಅರ್ಹತೆ ಪಡೆದ ಕನ್ನಡದ ಕಿರುಚಿತ್ರ 

2025ರ ಆಸ್ಕರ್‌ ಪ್ರಶಸ್ತಿಗೆ ಕನ್ನಡದ ಕಿರುಚಿತ್ರ ‘Sunflower were the first ones to know…’ ಅರ್ಹತೆ ಪಡೆದಿದೆ.

‘Sunflower were the first ones to know…’ ನೈಜ ದೃಶ್ಯಗಳ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿಗೆ ಅರ್ಹತೆ ಪಡೆದಿದೆ. ಈ ಕಿರು ಸಿನಿಮಾವನ್ನು ಫಿಲ್ಮಂ ಆ0ಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ವಿದ್ಯಾರ್ಥಿಗಳು ಅಂತಿಮ ವರ್ಷದ ಅಧ್ಯಯನದ ಭಾಗವಾಗಿ ನಿರ್ಮಿಸಿದ್ದಾರೆ.

‘Sunflower were the first ones to know…’ ಕಿರುಚಿತ್ರವನ್ನು ಮೈಸೂರಿನ ಚಿದಾನಂದ ಎಸ್‌. ನಾಯ್ಕ್‌ ನಿರ್ದೇಶಿಸಿದ್ದಾರೆ. ಸೂರಜ್‌ ಠಾಕೂರ್‌ ಛಾಯಾಗ್ರಹಣ, ಮನೋಜ್‌ ವಿ ಎಡಿಟಿಂಗ್‌ ಮತ್ತು ಅಭಿಶೇಕ್‌ ಕದಮ್‌  ಧ್ವನಿ ನೀಡಿದ್ದಾರೆ.

‘ನನಗೆ ನೆನಪಿರುವಷ್ಟು ಸಮಯದಿಂದ ಈ ಕಥೆಯನ್ನು ಹೇಳಲು ಬಯಸಿದ್ದೆ. ಈ ಕಥೆಯನ್ನು ಕೇಳುವುದು ಮಾತ್ರವಲ್ಲದೆ ಅದನ್ನು ಮರುಸೃಷ್ಟಿಸುವುದು ನಮ್ಮ ಗುರಿಯಾಗಿತ್ತು. ಈ ಕಥೆ ಪ್ರಪಂಚದಾದ್ಯಂತ ಇರುವ ಪ್ರೇಕ್ಷಕರನ್ನು ಪ್ರತಿಧ್ವನಿಸಲಿದೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ ನಿರ್ದೇಶಕ ಚಿದಾನಂದ್‌ ಎಸ್‌. ನಾಯ್ಕ್‌.

ಮೇ ತಿಂಗಳಲ್ಲಿ ‘Sunflower were the first ones to know…’ ಕಿರುಚಿತ್ರ ಕಾನ್‌ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರ (ಲಾ ಸಿನೆಫ್) ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!