ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ-1’ ಚಿತ್ರಕ್ಕೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಟೊಡರ್ ಲ್ಯಾಜರೋವ್ ಎಂಟ್ರಿ ಕೊಟ್ಟಿದ್ದಾರೆ.
ರಿಷಬ್ ಶೆಟ್ಟಿ ದೂರದ ಬಲ್ಗೇರಿಯಾದಿಂದ ಕಾಂತಾರ ಚಿತ್ರಕ್ಕಾಗಿ ಟೊಡರ್ ಲ್ಯಾಜರೋವ್ ಅವರನ್ನು ಕರೆದುಕೊಂಡು ಬಂದಿದ್ದಾರೆ. ಕಾಂತಾರ ಮೊದಲ ಭಾಗದಲ್ಲಿ ಎರಡು ಪ್ರಮುಖ ಸಾಹಸ ಸನ್ನಿವೇಶಗಳಿವೆ. ಸುದ್ದಿಯ ಪ್ರಕಾರ ಚಿತ್ರದ ಈ ಎರಡು ಆಕ್ಷನ್ ದೃಶ್ಯಗಳನ್ನು ಟೊಡರ್ ಲ್ಯಾಜರೋವ್ ನಿರ್ದೇಶನ ಮಾಡಲಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ಈ ಸ್ಟಂಟ್ಗಳನ್ನು ಸೆರೆ ಹಿಡಿಯುವ ಆಲೋಚನೆಯನ್ನು ರಿಷಬ್ ಶೆಟ್ಟಿ ಮಾಡಿದ್ದಾರೆ. ರಿಷಬ್ ಶೆಟ್ಟಿ ಚಿತ್ರಕ್ಕಾಗಿ ಕಳರಿ ಪಯಟ್ಟು ಸಮರಕಲೆಯನ್ನು ಕಲಿತಿದ್ದಾರೆ.
ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರದ ಅಸಾಮಾನ್ಯ ಆಕ್ಷನ್ ದೃಶ್ಯಗಳ ಟೊಡರ್ ಲ್ಯಾಜರೋವ್ ಅವರ ಕೆಲಸವನ್ನು ಕಂಡು ಖುದ್ದು ರಾಜಮೌಳಿ ಬೆರಗಾಗಿದ್ದರು. ಸಂದರ್ಶನದಲ್ಲಿ ರಾಜಮೌಳಿ, ಟೊಡರ್ ಲ್ಯಾಜರೋವ್ ಬಗ್ಗೆ ಹೊಗಳಿದ್ದರು.
ಕುಂದಾಪುರದಲ್ಲಿ 22 ಸಾವಿರ ಚದರ ಅಡಿ ವಿಸ್ತೀರ್ಣದ ಶೂಟಿಂಗ್ ಫ್ಲೋರ್ ನಿರ್ಮಿಸಿ ‘ಕಾಂತಾರ’ ಚಾಪ್ಟರ್-1 ಚಿತ್ರೀಕರಣ ನಡೆಸಲಾಗುತ್ತಿದೆ. ಅದರ ಒಳಗೆ ನಾಲ್ಕೈದು ಸೆಟ್ಗಳನ್ನು ನಿರ್ಮಿಸಲಾಗಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಎರಡನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ.
‘ಕಾಂತಾರ-1’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಕೆಲ ದಿನಗಳಲ್ಲಿ ಚಿತ್ರತಂಡ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯುವ ನಿರೀಕ್ಷೆ ಇದೆ. ಮುಂದಿನ ವರ್ಷ ಜೂನ್ ಸಮಯಕ್ಕೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.
Be the first to comment