‘ಅಣ್ತಮ್ತನ’ ಚಿತ್ರ ಘೋಷಣೆ

ಬಹುಭಾಷಾ ನಟ ಅಚ್ಯುತ್ ಕುಮಾರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಅಣ್ಣ ತಮ್ಮಂದಿರಾಗಿ ಮುಖ್ಯಭೂಮಿಕೆಯ, ವಿಶ್ವ ನಿರ್ದೇಶನದ ಚೊಚ್ಚಲ ಚಿತ್ರ ‘ಅಣ್ತಮ್ತನ’ ಘೋಷಣೆ ಆಗಿದೆ.

ಒಂದ್ ಕಥೆ ಹೇಳ್ಲಾ ಹಾಗೂ ಶಾಲಿವಾಹನ ಶಕೆ ಖ್ಯಾತಿಯ ಗಿರೀಶ್ ಜಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಅಣ್ಣ ತಮ್ಮ ಸಂಬಂಧ,  ಹಳೆ ಮೈಸೂರು ಸಂಸ್ಕೃತಿ, ನಂಬಿಕೆ ಮೂಢನಂಬಿಕೆ, ಮಣ್ಣಿನ ಆಚರಣೆಗಳ ಸುತ್ತ ಹೆಣೆದಿರುವ ಕಥೆ ಹೊಂದಿದೆ.

ಆದಿಚುಂಚನಗಿರಿ, ನಾಗಮಂಗಲ, ಮದ್ದೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಶೀಘ್ರದಲ್ಲೇ  ಪ್ರಾರಂಭವಾಗಲಿದೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಎಸ್ ವಿ ಸಂಗೀತ, ಶೈಲೇಶ್ ಕುಮಾರ್ ಸಂಭಾಷಣೆ, ಹರಿ ಪರಾಕ್ ಸಾಹಿತ್ಯ ಅಣ್ತಮ್ತನ ಚಿತ್ರಕ್ಕಿದೆ.

ವಿಶ್ವ ಅವರಿಗೆ ಪೇಟಾ’ಸ್ ಸಿನಿ ಕೆಫೆ ಮತ್ತು ಫಿಲ್ಮಿ ಮಾಂಕ್ ಸಹಯೋಗದೊಂದಿಗೆ ಕಿರಾತಕ ಪ್ರದೀಪ್ ರಾಜ್, ಪಿ ಸಿ ಶೇಖರ್, ಪ್ರಶಾಂತ್ ರಾಜಪ್ಪ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!