ಕನ್ನಡದ ನಟನಿಗೆ ಮಹಿಳೆಯಿಂದ ಹಲ್ಲೆ!

ನ್ನಡ ಚಿತ್ರ ನಟ ಹಾಗೂ ಕಿರುತೆರೆ ನಟ ಎನ್‌ ಟಿ ರಾಮಸ್ವಾಮಿಗೆ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ತೆಲುಗು ‘ಲವ್ ರೆಡ್ಡಿ’ ಸಿನಿಮಾದಲ್ಲಿ ರಾಮಸ್ವಾಮಿ ನಟಿಸಿದ್ದು, ಸಿನಿಮಾ ಅಕ್ಟೋಬರ್ 18ರಂದು ರಿಲೀಸ್ ಆಗಿದೆ. ಪ್ರೇಕ್ಷಕರಿಗೆ ಧನ್ಯವಾದ ಹೇಳುವ ಸಲುವಾಗಿ ಸಿನಿಮಾ ಮುಗಿದ ಬಳಿಕ  ಸಿನಿತಂಡ ಹೋಗಿದೆ. ಆಗ ರಾಮಸ್ವಾಮಿ ಅವರು  ಥಿಯೇಟರ್ ಒಳಗೆ ಹೋಗಿದ್ದಾರೆ. ಈ ವೇಳೆ ದಿಢೀರನೇ ಪ್ರೇಕ್ಷಕರ ಗುಂಪಿನಿಂದ ಓಡಿ ಬಂದ ಮಹಿಳೆಯೊಬ್ಬರು ರಾಮಸ್ವಾಮಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಅಲ್ಲಿದ್ದವರು ಎಷ್ಟೇ ಪ್ರಯತ್ನ ಪಟ್ಟರು ಮಹಿಳೆಯನ್ನು ಸಮಾಧಾನ ಮಾಡುಲು ಸಾಧ್ಯವಾಗಲಿಲ್ಲ. ಈ ಘಟನೆಯಿಂದ ಎನ್ ಟಿ ರಾಮಸ್ವಾಮಿ ಗಲಿಬಿಲಿಗೊಂಡರು. ‘ಲವ್ ರೆಡ್ಡಿ’ ಸಿನಿಮಾದಲ್ಲಿ ರಾಮಸ್ವಾಮಿ ವಿಲನ್ ಪಾತ್ರ ಮಾಡಿದ್ದಾರೆ. ನಾಯಕಿಯ ಪ್ರೀತಿಗೆ ಅಡ್ಡ ಬಂದು, ಆಕೆಯ ತಲೆಗೆ ಕಲ್ಲಿನಿಂದ ಹೊಡೆಯುವ ಪಾತ್ರವನ್ನು ರಾಮಸ್ವಾಮಿ ನಿಭಾಯಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಮಹಿಳೆ  ರಾಮಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿದ್ದವರು ‘ಅದು ಸಿನಿಮಾ, ನಿಜವಲ್ಲ’ ಎಂದು ಹೇಳಿದರೂ ಆಕೆ ಸಮಾಧಾನ ಆಗಲಿಲ್ಲ.

‘ಲವ್ ರೆಡ್ಡಿ’ ಸಿನಿಮಾ  ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಭಾಗದಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಚಿಕ್ಕಬಳ್ಳಾಪುರ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ಮಾಡಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!