ಏಷ್ಯಾದ ವಿವಿಧ ಭಾಗಗಳ ತಿನಿಸುಗಳು ಮಿಸೋ ಹಂಗ್ರಿಯಲ್ಲಿ ಲಭ್ಯ ಇದ್ದು, ಇದು ಗ್ರಾಹಕರ ಮನಸ್ಸನ್ನು ತಣಿಸುತ್ತಿದೆ.
ಇಲ್ಲಿ ಚೈನೀಸ್, ಕೊರಿಯಾ, ಇಂಡೋನೇಷ್ಯಾ, ದಕ್ಷಿಣ ಭಾರತ ಹಾಗೂ ಜಪಾನಿನ ಪ್ರಸಿದ್ಧ ತಿನಿಸುಗಳು ಲಭ್ಯವಿವೆ. ಇಲ್ಲಿ ನೂಡಲ್ಸ್ ಹಾಗೂ ಫ್ರೈಡ್ ರೈಸ್ ಜೊತೆಗೆ ಚಿಕನ್, ಪನ್ನೀರ್ ಸೇರಿದಂತೆ ಪ್ರೋಟೀನ್ ನಿಂದ ಮಾಡಿದ ಹಲವು ತಿಂಡಿಗಳು ಲಭ್ಯ ಇವೆ.
ವೆಂಕಟ್, ಅರ್ಜುನ್ ಹಾಗೂ ಆದಿತ್ಯ ಅವರು ಇದನ್ನು ಸ್ಥಾಪಿಸಿದ್ದಾರೆ. ವೆಂಕಟ್ ಅವರು ಜ್ಯೂಸ್ ಹಾಗೂ ಹಾಲಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅರ್ಜುನ್ ಅವರು ಜಾಗತಿಕ ಪ್ರವಾಸ ಕೈಗೊಂಡು ಹಲವು ಬಗೆಯ ತಿಂಡಿಗಳನ್ನು ಅನ್ವೆಷಿಸಿದ್ದಾರೆ. ಆದಿತ್ಯ ಅವರು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಬಾಲ್ಯದ ಈ ಮೂವರು ಸ್ನೇಹಿತರು ಗ್ರಾಹಕರಿಗೆ ನಾನಾ ತಿನಿಸುಗಳನ್ನು ಉಣಬಡಿಸುತ್ತಿದ್ದಾರೆ.
ನಾವು ಏಷ್ಯಾ ಭಾಗದಲ್ಲಿ ಮಾಡುವ ಅಡುಗೆ ತಂತ್ರವನ್ನು ಅರಿತುಕೊಂಡಿದ್ದೇವೆ. ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಬಯಸುತ್ತೇವೆ ಎಂದು ಈ ಸ್ನೇಹಿತರು ಹೇಳಿದ್ದಾರೆ.

Be the first to comment