ಪುಷ್ಪ-2

ಬಿಡುಗಡೆಗೂ ಮುನ್ನ ‘ಪುಷ್ಪ-2’ ಭರ್ಜರಿ ಬಿಸಿನೆಸ್

ಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ‘ಪುಷ್ಪ-2’ ಸಿನಿಮಾ ರಿಲೀಸ್ ಗೂ ಮುನ್ನವೇ ಭರ್ಜರಿ ಬಿಸಿನೆಸ್ ಮಾಡಿದೆ.

ಈ ಬಗ್ಗೆ ನಿರ್ಮಾಪಕರು ಮತ್ತು ವಿತರಕರು ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

‘ಈವರೆಗಿನ ಬೇರೆಲ್ಲ ಸಿನಿಮಾಗಳಿಂತ ಅತಿ ಹೆಚ್ಚಿನ 420 ಕೋಟಿ ರೂ. ಪ್ರೀ-ರಿಲೀಸ್​ ಬಿಸಿನೆಸ್  ಆಗಿದೆ. ಬಿಡುಗಡೆ ಬಳಿಕ ಆರಾಮಾಗಿ 1,000 ಕೋಟಿ ರೂಪಾಯಿ ಬಿಸಿನೆಸ್​ ಆಗಲಿದೆ’ ಎಂದು ಪುಷ್ಪ 2 ಸಿನಿಮಾದ  ನಿರ್ಮಾಪಕರು ಭರವಸೆ ನೀಡಿದ್ದಾರೆ.

‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ‘ಪುಷ್ಪ 2’ ಸಿನಿಮಾವನ್ನು ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಮಾಡಿದೆ. ಚಿತ್ರಕ್ಕೆ ಸುಕುಮಾರ್  ನಿರ್ದೇಶನ ಮಾಡಿದ್ದಾರೆ. ‘ಪುಷ್ಪ’ ಸಿನಿಮಾಗೆ ಅಲ್ಲು ಅರ್ಜುನ್ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಹಾಗಾಗಿ ಅದರ ಸೀಕ್ವೆಲ್ ಮೇಲೆ ನಿರೀಕ್ಷೆ ದೊಡ್ಡದಾಗಿದೆ. ಫಹಾದ್ ಫಾಸಿಲ್, ಡಾಲಿ ಧನಂಜಯ ಮುಂತಾದವರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಈ ಸಿನಿಮಾ ಆಗಸ್ಟ್ ತಿಂಗಳಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಕೆಲಸಗಳು ಬಾಕಿ ಇರುವ ಕಾರಣ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ‘ಪುಷ್ಪ-2’  ಡಿಸೆಂಬರ್​ 5ರಂದು ಬಿಡುಗಡೆ ಆಗಲಿದ್ದು, ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!