ನಟಿ ನಿಮ್ರತ್ ಜೊತೆ ಅಭಿಷೇಕ್‌ ಡೇಟಿಂಗ್ ವದಂತಿ

ನಟ ಅಭಿಷೇಕ್ ಬಚ್ಚನ್ ಹೆಸರು ನಟಿ ನಿಮ್ರತ್ ಕೌರ್ ಜೊತೆ ತಳುಕು ಹಾಕಿಕೊಂಡಿದೆ.  ಅಭಿಷೇಕ್ ಐಶ್ವರ್ಯಾಗೆ ವಿಚ್ಛೇದನ ನೀಡಲು ಹೊರಟಿದ್ದಾರೆ. ಹೀಗಾಗಿ ನಿಮ್ರತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿವೆ.

ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಷೇಕ್ ಬಚ್ಚನ್ ಕಾಣಿಸಿಕೊಂಡಿದ್ದರು. ಅಭಿಷೇಕ್ ಬಚ್ಚನ್ ವಿಮಾನ ನಿಲ್ದಾಣದಿಂದ ಹೊರಬಂದ ತಕ್ಷಣ ಪಾಪರಾಜಿಗಳತ್ತ ಕೋಪದಿಂದ ನೋಡುತ್ತಾರೆ. ಅಭಿಷೇಕ್ ಪಾಪರಾಜಿಯೊಂದಿಗೆ ‘ಬಸ್ ಭಯ್ಯಾ, ಅಬ್ ಹೋ ಗಯಾ’ ಎಂದು ಹೇಳಿದ್ದಾರೆ.

ಅಭಿಷೇಕ್ ಮತ್ತು ನಿಮ್ರತ್ ಕೌರ್ 2022 ರಲ್ಲಿ ‘ದಾಸ್ವಿ’ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದರು. ಅಲ್ಲಿಯೇ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಪತ್ನಿ ಪಾತ್ರದಲ್ಲಿ ನಿಮ್ರತ್ ಕೌರ್ ನಟಿಸಿದ್ದಾರೆ. ಚಿತ್ರದ ಸೆಟ್‌ನಲ್ಲಿ ಇಬ್ಬರೂ ಹತ್ತಿರವಾದರು ಎನ್ನಲಾಗಿದೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಮನಸ್ತಾಪಕ್ಕೆ ನಿಮ್ರತ್ ಕೌರ್ ಕಾರಣ ಎಂದು ಹೇಳಲಾಗುತ್ತಿದೆ.

ಸುಮಾರು 2 ವರ್ಷಗಳ ನಂತರ ಅಭಿಷೇಕ್ ಬಚ್ಚನ್-ನಿಮ್ರತ್ ಕೌರ್ ಡೇಟಿಂಗ್ ಚರ್ಚೆ ಶುರುವಾಗಿದೆ. ನಿಮ್ರತ್ ಕೌರ್ ಅವರು ‘ಲಂಚ್ ಬಾಕ್ಸ್’ ನಂತಹ ಉತ್ತಮ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಇದುವರೆಗೆ ಬೇರ್ಪಡುವುದಾಗಿ ಹೇಳಿಲ್ಲ. ಆದರೆ ಅವರ ವಿಚ್ಛೇದನ ಸುದ್ದಿ ಭಾರೀ ವದಂತಿ ಪಡೆದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!