ಕಾಮಿಡಿ ಕಿಲಾಡಿಗಳು

‘ಕಾಮಿಡಿ ಕಿಲಾಡಿಗಳು’ ಪ್ರೀಮಿಯರ್ ಲೀಗ್ ನ ಗ್ರಾಂಡ್ ಫಿನಾಲೆ

ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಕರುನಾಡಿನ ನಂ.1 ವಾಹಿನಿ ಜೀ಼ ಕನ್ನಡ ವಾಹಿನಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮೂಲಕ ನಿಮ್ಮನ್ನೆಲ್ಲ ನಗೆಗಡಲಲ್ಲಿ ತೇಲಾಡಿಸಿದೆ. 25 ವಾರಗಳ ತನಕ ನಡೆದ ಈ ಕಾರ್ಯಕ್ರಮಕ್ಕೆ ಈಗ ಫಿನಾಲೆಯ ಸಂಭ್ರಮ. ಈ ಶೋನಲ್ಲಿ ಐದು ತಂಡಗಳಿದ್ದು ಆನಂದ್ ಸನ್ ರೈಸಸ್, ರಾಯಲ್ ಚಂಗಪ್ಪ ಬುಲ್ಡೋಜರ್ಸ್, ಅಕುಲ್ ಟೈಟನ್ಸ್, ಅನು ವಾರಿಯರ್ಸ್ ಮತ್ತು ಕುರಿ ಸೂಪರ್ ಕಿಂಗ್ಸ್ ನಗುವಿನ ಪಟಾಕಿ ಹೊಡೆದಿರುವುದನ್ನು ನೋಡಿದ ನಿಮಗೆ ವಿಜೇತರು ಯಾರಾಗ್ತಾರೆ ಎಂಬ ಕುತೂಹಲ ಇರಬಹುದು. ಅದಕ್ಕೆ ಉತ್ತರ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’ನ ಫಿನಾಲೆಯಲ್ಲಿ ಸಿಗಲಿದೆ.

ಕಾಮಿಡಿ ಕಿಲಾಡಿಗಳು

ನವರಸ ನಾಯಕ ಜಗ್ಗೇಶ್, ಅನುಶ್ರೀ, ಕುರಿ ಪ್ರತಾಪ್, ಅಕುಲ್ ಬಾಲಾಜಿ, ಮಾಸ್ಟರ್ ಆನಂದ್ ಮತ್ತು ಶ್ವೇತಾ ಚಂಗಪ್ಪ ಸಮ್ಮುಖದಲ್ಲಿ ಈ ಫಿನಾಲೆ ನಡೆಯಲಿದ್ದು, ಖ್ಯಾತ ನಿರೂಪಕಿ ಚೈತ್ರಾ ವಾಸುದೇವನ್ ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಕನ್ನಡದ ಜೂನಿಯರ್ ಅಮಿತಾಭ್ ಬಚ್ಚನ್ ವಿಶೇಷ ಅತಿಥಿಯಾಗಿ ಬಂದಿದ್ದು ತಾನು ಅಣ್ಣಾವ್ರ ದೊಡ್ಡ ಅಭಿಮಾನಿ ಎಂದು ಅಪ್ಪಾಜಿ ಹಾಡಿಗೆ ಹಾಡಿ ಕುಣಿದು ಫಿನಾಲೆಗೆ ಮತ್ತಷ್ಟು ರಂಗನ್ನು ತಂದಿದ್ದಾರೆ.

ಕಾಮಿಡಿ ಕಿಲಾಡಿಗಳು

ವಿನ್ನರ್ ಪಟ್ಟ ಯಾರ ಮುಡಿಗೇರಲಿದೆ ಎಂದು ತಿಳ್ಕೊಳೋಕೆ ವೀಕ್ಷಿಸಿ ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’ ಅದ್ದೂರಿ ಗ್ರಾಂಡ್ ಫಿನಾಲೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ 11 ಗಂಟೆಯ ವರೆಗೆ ನಿಮ್ಮ ಜೀ಼ ಕನ್ನಡದಲ್ಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!