ಬಿಗ್ ಬಾಸ್

ಬದಲಾವಣೆ ಜಾರಿಗೆ ತಂದ ಬಿಗ್ ಬಾಸ್

ಸುದೀಪ್ ಅವರ ಸೂಚನೆಯನ್ನು ಒಪ್ಪಿ ‘ಬಿಗ್ ಬಾಸ್​’ ಲ್ಲಿ ಬದಲಾವಣೆ ಜಾರಿಗೆ ತರಲಾಗಿದೆ.

ಇಂಗ್ಲಿಷ್​ನ ಹೆಚ್ಚು ಬಳಕೆ ಮಾಡದಂತೆ ‘ಬಿಗ್ ಬಾಸ್​’ ಅಕ್ಟೋಬರ್ 16ರ ಎಪಿಸೋಡ್​ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಹೇಳಿದ ಬದಲಾವಣೆಯಲ್ಲಿ ಇದು ಕೂಡ ಇತ್ತು ಎನ್ನಲಾಗಿದೆ.

ಬಿಗ್ ಬಾಸ್​ನಲ್ಲಿ ಇಂಗ್ಲಿಷ್ ವಾಕ್ಯಗಳನ್ನು ಹೆಚ್ಚು ಬಳಕೆ ಮಾಡುವಂತಿಲ್ಲ. ಕನ್ನಡವೇ ಬಳಕೆ ಆಗಬೇಕು.  ಇಂಗ್ಲಿಷ್ ಬಳಕೆ ಆದರೆ  ‘ಹುಟ್ಟಿದರೇ ಕನ್ನಡ್​ ನಾಡಲ್ಲಿ ಹುಟ್ಟಬೇಕು’  ಹಾಡನ್ನು ಹಾಕುತ್ತಿದ್ದರು. ಆದರೆ ಈ ಪದ್ಧತಿ ಇತ್ತೀಚೆಗೆ ಮಾಯ ಆಗಿತ್ತು. ಈಗ ಸುದೀಪ್ ಅವರ ಸೂಚನೆಯನ್ನು ಒಪ್ಪಿದ ಬಳಿಕ ಇದನ್ನು ಮತ್ತೆ ಜಾರಿಗೆ ತರಲಾಗಿದೆ.

ಕನ್ನಡ ಪರ ಹೋರಾಟಗಾರ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಈ ಬಗ್ಗೆ ಟ್ವೀಟ್ ಮಾಡಿ ‘ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಬಿಗ್ ಬಾಸ್ ಆಯೋಜಕರು ಒಪ್ಪಿದ್ದಾರೆ. ತಮಗೂ ಹಾಗೂ ಕನ್ನಡದ ಪರವಾಗಿ ನಿಂತ ಸುದೀಪ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. ಬದಲಾವಣೆ ನೀವೇ ನೋಡುವಿರಿ’ ಎಂದಿದ್ದರು. ಈಗ  ಬದಲಾವಣೆ ಕಾಣಿಸಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಬಳಿಕ ಬಿಗ್ ಬಾಸ್ ತೊರೆಯೋದಾಗಿ ಸುದೀಪ್ ಘೋಷಣೆ ಮಾಡಿದ್ದರು. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಸುದೀಪ್ ಅವರು  ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿತ್ತು. ಈ ಬಗ್ಗೆ ಮಾತನಾಡಿದ್ದ ರೂಪೇಶ್ ರಾಜಣ್ಣ ಕಲರ್ಸ್ ವಾಹಿನಿ ಮಾಡಿದ ತಪ್ಪನ್ನು ಸರಿಪಡಿಸಿಕೊಂಡಿದೆ ಎಂದಿದ್ದರು.

ಈಗ ಸುದೀಪ್ ಹೇಳಿದ್ದ ಬದಲಾವಣೆಗೆ ಕಲರ್ಸ್ ಕನ್ನಡ ಒಪ್ಪಿದ್ದು, ಇದು ಎಪಿಸೋಡ್​ನಲ್ಲೇ ಗೊತ್ತಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!