ಟೆನೆಂಟ್ ಟೀಸರ್

‘ಟೆನೆಂಟ್’ ಚಿತ್ರದ ಟೀಸರ್ ರಿಲೀಸ್

ಧರ್ಮ ಕೀರ್ತಿರಾಜ್, ಉಗ್ರಂ ಮಂಜು ನಟನೆಯ ‘ಟೆನೆಂಟ್’ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ.

ಧರ್ಮ ಕೀರ್ತಿರಾಜ್‌ಗೆ ‘ಟೆನೆಂಟ್’ ಸಿನಿಮಾದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆ. ‘ಉಗ್ರಂ’ ಮಂಜು ವಿಶಿಷ್ಠ ಪಾತ್ರದ ಮೂಲಕ ಮಿಂಚಿದ್ದಾರೆ. ಟೀಸರ್ ಸಾಕಷ್ಟು ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಧರ್ಮ ಮತ್ತು ಮಂಜು ಜೊತೆಗೆ ತಿಲಕ್, ರಾಕೇಶ್ ಮಯ್ಯ, ಸೋನು ಗೌಡ  ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಧರ್ ಶಾಸ್ತ್ರೀ  ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

‘ಟೆನೆಂಟ್’ ಒಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ಮಾಸ್ಟರ್ ಚಾಯ್ಸ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ಟಿ ನಿರ್ಮಾಣ ಮಾಡಿರುವ ‘ಟೆನಂಟ್’ ಟೀಸರ್ ನ್ನು ಕನ್ನಡ ಚಿತ್ರರಂಗದ ಸ್ಯಾಂಡಲ್‌ವುಡ್‌ನ ಅನೇಕ ಗಣ್ಯರು ರಿಲೀಸ್ ಮಾಡಿದ್ದಾರೆ.  ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಛಾಯಾಗ್ರಹಕ ಸತ್ಯ ಹೆಗಡೆ, ಡಿಸೈನರ್ ಹಾಗೂ ವಿತರಕಿ ಸಚಿನ್ನಾ ಹೆಗ್ಗಾರ್, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ನಟ ವಿಕ್ಕಿ ವರುಣ್, ನವೀಶ್ ಶಂಕರ್ ಮುಂತಾದವರು ‘ಟೆನೆಂಟ್’ ಸಿನಿಮಾ ತಂಡಕ್ಕೆ ಸಾಥ್ ನೀಡಿದ್ದಾರೆ.

‘ಬಿಗ್ ಬಾಸ್’ 11ರಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿರುವ ಉಗ್ರಂ ಮಂಜು ಹಾಗೂ ಧರ್ಮ ಕೀರ್ತಿರಾಜ್ ಒಟ್ಟಿಗೆ ‘ಟೆನೆಂಟ್’ ಸಿನಿಮಾ ಮಾಡಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲೇ ಈ ಚಿತ್ರದಲ್ಲಿಇಬ್ಬರು ನಟಿಸಿದ್ದು ಚಿತ್ರವಲ್ಲಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!