ಒಟಿಟಿಗೆ ಬಂತು ಸಸ್ಪೆನ್ಸ್‌ ಥ್ರಿಲರ್‌ ‘ಕ್ಲಾಂತ’

ಕನ್ನಡದ ಸಸ್ಪೆನ್ಸ್‌ ಥ್ರಿಲರ್‌ ಸಿನಿಮಾ ‘ಕ್ಲಾಂತ’ ಒಟಿಟಿಗೆ ಲಗ್ಗೆ ಇಟ್ಟಿದೆ.

ಚಿತ್ರದಲ್ಲಿ ವಿಘ್ನೇಶ್, ಸಂಗೀತಾ ಭಟ್, ಶೋಭರಾಜ್, ವೀಣಾ ಸುಂದರ್ ಹಾಗೂ ಇನ್ನಿತರರು ನಟಿಸಿದ್ದಾರೆ. ‘ಕ್ಲಾಂತ’ ಸಿನಿಮಾ  ಪ್ರೈಮ್ ವಿಡಿಯೋಗೆ ಎಂಟ್ರಿ ಕೊಟ್ಟಿದೆ. ಸಿನಿಮಾ ನೋಡಲು 99 ರೂ. ಪಾವತಿಸಬೇಕು. ಈ ವರ್ಷ ಜನವರಿ 19ಕ್ಕೆ ಕ್ಲಾಂತ ಸಿನಿಮಾ ತೆರೆ ಕಂಡಿತ್ತು. ಒಂಬತ್ತು ತಿಂಗಳ ನಂತರ ಈ ಸಿನಿಮಾಗೆ ಒಟಿಟಿಗೆ ಲಗ್ಗೆ ಇಟ್ಟಿದೆ.

ಕ್ಲಾಂತ ಎಂದರೆ ದಣಿವು. ಜೋಡಿ ಟ್ರಕ್ಕಿಂಗ್‌ ಸಮಯದಲ್ಲಿ ಕಾಡಿನಲ್ಲಿ ಸಿಕ್ಕಿ ಹಾಕಿಕೊಂಡಾಗ ಏನೆಲ್ಲ ಸಮಸ್ಯೆಯಿಂದ ಪಾರಾಗ್ತಾರೆ ಎಂಬುದೇ ಸಿನಿಮಾದ ಒನ್‌ಲೈನ್‌ ಸ್ಟೋರಿ. ವೈಭವ್ ಪ್ರಶಾಂತ್ ಕ್ಲಾಂತ ಚಿತ್ರ ನಿರ್ದೇಶನ ಮಾಡಿದ್ದಾರೆ. ಸಂಗೀತಾ ಭಟ್ ಜೊತೆಗೆ  ಎಂ. ವಿಘ್ನೇಶ್‌ ನಾಯಕರಾಗಿ ಅಭಿನಯಿಸಿದ್ದಾರೆ. ಈ ಜೋಡಿಯ  ಮೋಹಕ ಮತ್ತು ಮಾದಕ ದೃಶ್ಯ ಸಿನಿಮಾದಲ್ಲಿ ಮೂಡಿ ಬಂದಿವೆ.

ಚಿತ್ರವನ್ನು ಕುಕ್ಕೆ ಸುಬ್ರಮಣ್ಯ, ಗುಂಡ್ಯ, ಕಳಸ ಸುತ್ತಮುತ್ತಲ ಅರಣ್ಯದಲ್ಲಿ40 ದಿನಗಳ ಕಾಲ  ಚಿತ್ರೀಕರಣ ಮಾಡಲಾಗಿದೆ. ಅದ್ದೂರಿ ವೆಚ್ಚದಲ್ಲಿಯೇ ನಿರ್ಮಾಣವಾದ ‘ಕ್ಲಾಂತ’ ಚಿತ್ರದಲ್ಲಿ ಭರ್ಜರಿ ಆಯಕ್ಷನ್ ಕೂಡ ಇವೆ. ಚಿತ್ರದ ಮೂಲಕ ಎಳೆ ಸಸ್ಪೆನ್ಸ್ ಆಗಿದ್ದರೂ ಇಲ್ಲಿ ಬೋಲ್ಡ್ ಸೀನ್‌ಗೆ ಕೊರತೆ ಇಲ್ಲ.

‘ಕ್ಲಾಂತ’ ಸಿನಿಮಾಕ್ಕೆ ಎಸ್.ಪಿ.ಚಂದ್ರಕಾಂತ್ ಸಂಗೀತ ಕೊಟ್ಟಿದ್ದಾರೆ. ಮೋಹನ್ ಲೋಕನಾಥ್ ಛಾಯಾಗ್ರಹಣ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!