ಘೋಸ್ಟ್ ಹಂಟರ್ ಕುರಿತ ಸಿನಿಮಾ ‘ಮಾಂತ್ರಿಕ’ ಅಕ್ಟೋಬರ್ 18ರಂದು ಬಿಡುಗಡೆ ಆಗಲಿದೆ.
ನಂಬಿಕೆ, ಅಪನಂಬಿಕೆ, ಟೈಮ್ ಟ್ರಾವೆಲ್ ಮುಂತಾದ ವಿಷಯಗಳ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ವ್ಯಾನವರ್ಣ ಜಮ್ಮುಲ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಮುಖ್ಯ ಪಾತ್ರದಲ್ಲೂ ಅವರು ನಟಿಸಿದ್ದಾರೆ. ಜೊತೆಗೆ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ನಿರ್ಮಾಣ, ನಿರ್ದೇಶನ ಸೇರಿದಂತೆ ಒಟ್ಟು 8 ವಿಭಾಗಗಳಲ್ಲಿ ಅವರು ಕೆಲಸ ಮಾಡಿದ್ದಾರೆ.
ಗೆಟಿವ್ ಎನರ್ಜಿಗಳ ಸತ್ಯಾಸತ್ಯತೆಯ ಕುರಿತು ಹುಡುಕಾಟ ನಡೆಸುವ ಒಬ್ಬನನ್ನು ಇಟ್ಟುಕೊಂಡು ಈ ಸಿನಿಮಾ ತಯಾರಾಗಿದೆ. ಸಿನಿಮಾವನ್ನು 40ರಿಂದ 50 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವಿತರಕ ವಿಜಯ್ ಕುಮಾರ್ ಹೇಳಿದ್ದಾರೆ.
‘ಮಾಂತ್ರಿಕ’ ಸಿನಿಮಾದಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ನಡೆಯುವ ಟೈಂ ಟ್ರಾವೆಲ್ ಕಥೆ ಇದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದ ಮಾರ್ನುಡಿ ಎಂಬ ಸ್ಥಳದಲ್ಲಿ ಕಥೆ ನಡೆಯುತ್ತದೆ. ದಿನದ 24 ಗಂಟೆಯೂ ಮಾನವ ಭಯದಲ್ಲೇ ಬದುಕುತ್ತಿದ್ದಾನೆ. ಮೊದಲು ಅಂಥ ಭಯವನ್ನು ನಮ್ಮ ಮನಸಿನಿಂದ ತೆಗೆದುಹಾಕಿಬೇಕು. ಮೂಢನಂಬಿಕೆಯಿಂದ ಆಚೆ ಬನ್ನಿ ಎಂಬ ಸಂದೇಶವನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ’ ಎಂದು ವ್ಯಾನವರ್ಣ ಜಮ್ಮುಲ ಹೇಳಿದ್ದಾರೆ.
‘ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್’ ಮೂಲಕ ‘ಮಾಂತ್ರಿಕ’ ಸಿನಿಮಾ ನಿರ್ಮಾಣ ಆಗಿದೆ. ರಾಧಿಕಾ ಮಾಲಿ ಪಾಟೀಲ ಮತ್ತು ಮೈಥಿಲಿ ನಾಯಕ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ವ್ಯಾನವರ್ಣ ಅವರ ಪತ್ನಿ ಆಯನಾ ಚಿತ್ರದ ಕಾರ್ಯಕಾರಿ ನಿರ್ಮಾಪಕಿ ಹಾಗೂ ನಿರ್ದೇಶನದಲ್ಲಿ ಸಾಥ್ ನೀಡಿದ್ದಾರೆ. ಸ್ಟಾಲಿನ್ ಸಂಗೀತ ನಿರ್ದೇಶನ, ಅನಿಲ್ ಆಂಟೋನಿ ಮತ್ತು ರಮೇಶ್ ಮರ‍್ರಿಪಲ್ಲಿ ಛಾಯಾಗ್ರಹಣ, . ಲಯನ್ ಜಿ. ಗಂಗರಾಜು ಸಾಹಸ ನಿರ್ದೇಶನ ಮಾಡಿದ್ದಾರೆ.
Be the first to comment