ಕೈಗಾರಿಕೋದ್ಯಮಿ ರತನ್ ಟಾಟಾ ಕುರಿತಾದ ಬಯೋಪಿಕ್ ನಿರ್ಮಿಸುವುದಾಗಿ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಕಂಪನಿಯ ಎಂಡಿ ಪುನಿತ್ ಗೋಯೆಂಕಾ ಅವರು ಘೋಷಿಸಿದ್ದಾರೆ.
‘ನಾವು ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಭಾರವಾದ ಹೃದಯದಿಂದ ಪದ್ಮವಿಭೂಷಣ ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇವೆ.ಅವರ ನಾಯಕತ್ವ, ದೂರದೃಷ್ಟಿ, ಸಹಾನುಭೂತಿ ಮತ್ತು ಅನೇಕ ತಲೆಮಾರುಗಳ ಭಾರತೀಯರಿಗೆ ಒಂದು ರೀತಿ ನೈತಿಕ ದಾರಿ ದೀಪವಾಗಿದೆ. ರತನ್ ಟಾಟಾ ಬಯೋಪಿಕ್ ಮಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು’ ಎಂದು ಪುನಿತ್ ಗೋಯೆಂಕಾ ಅವರು ತಿಳಿಸಿದ್ದಾರೆ.
‘ರತನ್ ಟಾಟಾ ಅವರು ಮಾಡಿದ ಮಹತ್ತರವಾದ ಕೆಲಸವನ್ನು ರಾಷ್ಟ್ರ ಮತ್ತು ವಿಶ್ವಕ್ಕೆ ವಿಶೇಷವಾಗಿ ಯುವಕರಿಗೆ ಪ್ರಸ್ತುತಪಡಿಸಬೇಕು, ಹಾಗಾಗಿ ಜೀ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಡಲಿದೆ’ ಎಂದು ಹೇಳಿದ್ದಾರೆ.
ಈ ಚಲನಚಿತ್ರವನ್ನು ಜಾಗತಿಕವಾಗಿ ತಲುಪಲು ಜೀ ಸ್ಟುಡಿಯೋಸ್ WION (ವರ್ಲ್ಡ್ ಈಸ್ ಒನ್ ನ್ಯೂಸ್) ಜೊತೆಗೆ ಕೈಜೋಡಿಸಲಿದೆ. ಇದರಿಂದ ಚಲನಚಿತ್ರ 190 ಕ್ಕೂ ಹೆಚ್ಚು ದೇಶಗಳಲ್ಲಿ ಜಾಗತಿಕವಾಗಿ ತಲುಪಬಹುದು. ಆ ಮೂಲಕ ರತನ್ ಟಾಟಾ ಅವರ ವ್ಯಕ್ತಿತ್ವ ಮತ್ತು ಜಾಗತಿಕವಾಗಿರುವ ಅವರ ಕಾರ್ಯಗಳಿಗೆ ಗೌರವವನ್ನು ಸೂಚಿಸಿದಂತಾಗುತ್ತದೆ ಎಂದು ಜೀ ಹೇಳಿದೆ.

Be the first to comment