ರಾಕಿಂಗ್ ಸ್ಟಾರ್

ಲಾಯರ್ ಪಾತ್ರದಲ್ಲಿ ರಾಕಿಂಗ್ ಸ್ಟಾರ್!

ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದಲ್ಲಿ ವಕೀಲರಾಗಿ ಮಿಂಚಲಿದ್ದಾರೆ.

‘ಟಾಕ್ಸಿಕ್’ ಚಿತ್ರದ ಎನ್ನಲಾದ ಹೊಸ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಯಶ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಅವರ ಲಾಯರ್ ಲುಕ್ ಗೆ  ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ರೀತಿಯ ಲುಕ್ ಅಲ್ಲಿ ಯಶ್ ಕಾಣಿಸಿಕೊಂಡಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ  ಈ ಲುಕ್‌ನ ಫೋಟೋ ಹಾಗೂ ವಿಡಿಯೋ  ಹೆಚ್ಚು ಗಮನ ಸೆಳೆಯುತ್ತಿವೆ. ಈ  ಲುಕ್ ಯಾವ ಚಿತ್ರಕ್ಕೆ ಅನ್ನೋ ಪ್ರಶ್ನೆ ಇದೆ.  ಬಹುಶಃ ಇದು ಜಾಹೀರಾತು ಇರಬೇಕು ಅನ್ನೋರೇ ಹೆಚ್ಚಿದ್ದಾರೆ. ಆದರೂ ಇದು ಟಾಕ್ಸಿಕ್ ಸಿನಿಮಾದ ಲೀಕ್ ಸೀನ್ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಚಿತ್ರದ ಪ್ರಚಾರ ಶೂಟಿಂಗ್ ವೇಳೆಯಲ್ಲಿ  ಯಶ್ ಲಾಯರ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ನಡಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ವಿವಿಧೆಡೆ ‘ಟಾಕ್ಸಿಕ್’ ಚಿತ್ರೀಕರಣ ನಡೆದಿದೆ. ಮುಂಬೈನಲ್ಲಿ ಈ ತಿಂಗಳ ಕೊನೆಯಲ್ಲಿ ಸಿನಿಮಾ ಶೂಟಿಂಗ್ ಶುರು ಆಗುತ್ತಿದೆ. ಮುಂಬೈನಲ್ಲಿ ಔಟ್‌ ಡೋರ್ ಶೂಟಿಂಗ್ ಪ್ಲಾನ್ ಆಗಿದೆ. ನಾಯಕಿ ಕಿಯಾರಾ ಅಡ್ವಾಣಿ ಈ ಹಂತದ ಚಿತ್ರೀಕರಣದಲ್ಲೂ ಭಾಗಿ ಆಗುತ್ತಿದ್ದಾರೆ. ಮುಂಬೈ ಶೂಟಿಂಗ್ ಬಗ್ಗೆ ಸಿನಿಮಾ ತಂಡ ಎಲ್ಲೂ ಅಧಿಕೃತವಾಗಿ ಇನ್ನು ಹೇಳಿಲ್ಲ.

‘ಕೆಜಿಎಫ್ -2’ ಬಳಿಕ ಬರುತ್ತಿರುವ ‘ಟಾಕ್ಸಿಕ್’ ಕುರಿತಾದ ಕುತೂಹಲ ಭಾರಿ ಹೆಚ್ಚಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!