ಭೈರತಿ ರಣಗಲ್‌

ನ.15ರಂದು ಭೈರತಿ ರಣಗಲ್‌ ಬಿಡುಗಡೆ

ಶಿವರಾಜ್‌ಕುಮಾರ್ ನಟನೆ, ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ ಸಿನಿಮಾ ನ.15ರಂದು ಬಿಡುಗಡೆ ಆಗುತ್ತಿದೆ.

‘ಭೈರತಿ ರಣಗಲ್’ ಶಿವರಾಜ್‌ಕುಮಾರ್‌ ಅವರ ಈ ವರ್ಷದ ಎರಡನೇ ಸಿನಿಮಾ. ವಕೀಲರಾಗಿ ಶಿವರಾಜ್‌ಕುಮಾರ್‌, ವೈದ್ಯೆಯಾಗಿ ನಾಯಕಿ ರುಕ್ಮಿಣಿ ವಸಂತ್‌ ಕಾಣಿಸಿಕೊಂಡಿದ್ದಾರೆ.

‘ಭೈರತಿ ರಣಗಲ್’ ಚಿತ್ರದ ‘ಕಾವಲಿಗ’ ಎಂಬ ಹಾಡು ಬಿಡುಗಡೆ ಯಾಗಿದ್ದು, ಪಾತ್ರಗಳನ್ನು ಹಾಡಿನ ಮೂಲಕ ಪರಿಚಯಿಸಲಾಗಿದೆ. ‘ಭೈರತಿ ರಣಗಲ್‌’ ಪಾತ್ರ ಸೃಷ್ಟಿಯಾಗುವ ಮುನ್ನ ಆತ ಏನಾಗಿದ್ದ ಎನ್ನುವ ಕಥೆಯನ್ನು ಈ ಹಾಡು ತೆರೆದಿಟ್ಟಿದೆ. ರವಿ ಬಸ್ರೂರು ಸಂಗೀತ ನೀಡಿರುವ ಈ ಹಾಡಿಗೆ ವಿಜಯ್‌ ಪ್ರಕಾಶ್‌ ಧ್ವನಿಯಾಗಿದ್ದಾರೆ.

‘ಮಫ್ತಿ’ ಸಿನಿಮಾದ‌ ಪ್ರೀಕ್ವೆಲ್ ಆಗಿರುವ ಈ ಸಿನಿಮಾವನ್ನು ‘ಗೀತಾ ಪಿಕ್ಚರ್ಸ್‌’ ಲಾಂಛನದಡಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ‘ವೇದ’ ಸಿನಿಮಾ ಬಳಿಕ ಗೀತಾ ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದೆ.

‘ಭೈರತಿ ರಣಗಲ್’ ಚಿತ್ರದ ತಾರಾಬಳಗದಲ್ಲಿ ರಾಹುಲ್ ಬೋಸ್‍, ಅವಿನಾಶ್, ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಮುಂತಾದವರಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!