‘ವೃತ್ತ’ ಸಿನಿಮಾಗೆ ನೀನಾಸಂ ಸತೀಶ್ ಬೆಂಬಲ

ನಟ ನೀನಾಸಂ ಸತೀಶ್ ಸಸ್ಪೆನ್ಸ್ ಥ್ರಿಲ್ಲರ್ ಕತೆಯ ‘ವೃತ್ತ’ ಸಿನಿಮಾಕ್ಕೆ ಬೆಂಬಲ ಸೂಚಿಸಿದ್ದಾರೆ.

ಸಿನಿಮಾ ಟೀಸರ್‌, ಟ್ರೇಲರ್‌ ನೋಡಿ ಮೆಚ್ಚಿಕೊಂಡಿರುವ ನೀನಾಸಂ ಸತೀಶ್ ತಮ್ಮದೇ ಬ್ಯಾನರ್‌ ಅಡಿಯಲ್ಲಿ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ.

ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದ ಸತೀಶ್, ಹೊಸಬರ ತಂಡವಾಗಿದ್ದರೂ  ಚೆನ್ನಾಗಿಯೇ ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ ಎಂದು  ಟೀಸರ್ ಅನ್ನು  ಮೆಚ್ಚಿಕೊಂಡರು.

‘ವೃತ್ತ’ ಸಿನಿಮಾವನ್ನು ಲಿಖಿಕ್‌ ಕುಮಾರ್‌ ಎಸ್ ನಿರ್ದೇಶನ ಮಾಡಲಿದ್ದಾರೆ. ಲಕ್ಷ್ಯ ಆರ್ಟ್ಸ್‌ ಬ್ಯಾನರ್‌ ಅಡಿಯಲ್ಲಿ ಟಿ ಶಿವಕುಮಾರ್‌ ‘ವೃತ್ತ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಒಂದು ಪಾತ್ರದ ಸುತ್ತ ಸುತ್ತುವ ಕತೆಯಾಗಿದೆ. ಸಿನಿಮಾಕ್ಕೆ ಸಿಂಕ್ರೋನೈಸ್‌ ಮಾಡಿದ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಯೋಗೀಶ್‌ ಗೌಡ  ಕಥೆ,  ಸುರೇಶ್‌ ಆರ್ಮುಗಂ ಸಂಕಲನ, ಶಂಕರ್‌ ರಾಮನ್‌ ಅವರ ಸಂಭಾಷಣೆ, ಗೌತಮ್‌ ಕೃಷ್ಣ  ಛಾಯಾಗ್ರಹಣ ಮತ್ತು ಆಂಟನಿ ಹಾಗೂ ಹರಿ ಕ್ರಿಶಾಂತ್‌ ಎಸ್‌ ಅವರ ಸಂಗೀತ ಚಿತ್ರಕ್ಕಿದೆ.

ಚಿತ್ರದ ಟ್ರೇಲರ್ ಲಾಂಚ್ ಮಾಡಲು ಚಿತ್ರತಂಡ ತಯಾರಿ ನಡೆಸಿದ್ದು, ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!