ಒಂದು ಲವ್ ಸ್ಟೋರಿಯ ಜೊತೆಗೆ ಹಳ್ಳಿ ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ಕಥೆ ಮಾಡಿರುವ ವಿಜಯ್ ಎಸ್. ಸಧ್ಯದಲ್ಲೇ ಚಿತ್ರೀಕರಣ ಕೂಡ ಆರಂಭಿಸಲಿದ್ದಾರೆ. ಇತ್ತೀಚೆಗಷ್ಟೇ ‘ನಿಮ್ಮೂರು’ ಎಂಬ ಈ ಚಿತ್ರದ ಶೀರ್ಷಿಕೆಯನ್ನು ನಿರ್ದೇಶಕರ ಸಂಘದ ಅಧ್ಯಕ್ಷ ಡಾ|| ವಿ.ನಾಗೇಂದ್ರಪ್ರಸಾದ್ ಅವರು ಅನಾವರಣಗೊಳಿಸಿದರು. ಹಳ್ಳಿಯಲ್ಲಿ ರೈತರು ತಾವು ಬೆಳೆದಂತಹ ಬೆಳೆಗೆ ಉತ್ತಮ ಬೆಲೆ ಸಿಗದೇ ಹೋದಾಗ ಅದು ಏನೆಲ್ಲಾ ಅನಾಹುತಗಳಿಗೆ ಕಾರಣವಾಗುತ್ತದೆ. ಸಾಲ ಪಡೆದು ಬೆಳೆ ಬೆಳೆದ ರೈತರು ಅನುಭವಿಸುವ ತೊಂದರೆಗಳೇನು? ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಅಲ್ಲದೆ ಗ್ರಾಮದ ಯುವಕನೊಬ್ಬ ಪ್ರೀತಿಯ ಬಲೆಯಲ್ಲಿ ಬಿದ್ದು ತನ್ನ ಪ್ರೀತಿಯನ್ನು ಉಳಿಸಿಕೊಳ್ಳದೆ ಊರನ್ನೇ ತೊರೆದು ಹೋಗಿರುತ್ತಾನೆ. ನಂತರ ಆತ ವಾಪಸ್ ತನ್ನೂರಿಗೆ ಬಂದು ಹಳ್ಳಿಯ ಜನರಲ್ಲಿ ಜಾಗೃತಿ ತುಂಬಿ ಆ ಊರಿನ ಏಳಿಗೆಗೆ ಹೇಗೆ ಕಾರಣವಾಗುತ್ತಾನೆ ಎಂಬ ಅಂಶವು ಈ ಚಿತ್ರದಲ್ಲಿದೆ.
ಚಾಮರಾಜನಗರ, ಯಳಂದೂರು, ಚಿಕ್ಕಮಗಳೂರು, ರಾಣಿಬೆನ್ನೂರು, ಹಾಸನ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಚಿತ್ರದ ನಾಯಕ-ನಾಯಕಿ ಪಾತ್ರಕ್ಕೆ ಹುಡುಕಾಟ ನಡೆಸಲಾಗಿದೆ. ಉಳಿದಂತೆ ಮೀಸೆ ಆಂಜನಪ್ಪ, ಸುಧಾ ಆರ್. ಶ್ರೀಕಾಂತ್ ಹೊನ್ನಾವಳ್ಳಿ, ಕೆ.ಡಿ. ವೆಂಕಟೇಶ್ ತಾರಾಬಳಗದಲ್ಲಿದ್ದಾರೆ.
ಹಠವಾದಿ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ರಾಜಶೇಖರ್ ರಾಣಿಬೆನ್ನೂರು, ಚಂದ್ರಶೇಖರ್ ದಾವಣಗೆರೆ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ವಿಜಯ್ ಎಸ್ ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ಅಭಿನಂದನ ಕಶ್ಯಪ್, ಸಾಹಿತ್ಯ ಅನುರಾಜ್ ಮಧುಗಿರಿ, ಕಲಾ ನಿರ್ದೇಶನ ಲೋಕೇಶ್ ಯರಂಬಳ್ಳಿ, ನಿರ್ದೇಶನ ನೀಲರಾಜ್.
Pingback: go to these guys
Pingback: Devops solutions
Pingback: CI CD
Pingback: бинанс отзывы