ಸ್ಯಾಂಡಲ್ವುಡ್ ಕಡೆಗೆ ಬೇರೆ ಭಾಷೆಯವರು ನೋಡಲು ‘ಲಹರಿ ಸಂಸ್ಥೆ’ಯು ಒಂದು ಕಾರಣವಾಗಿದೆ. 1974ರಲ್ಲಿ ಮನೋಹರನಾಯ್ಡು ಸಾರಥ್ಯದಲ್ಲಿ ರೂ.500 ಮೊತ್ತದಲ್ಲಿ ಸಂಸ್ಥೆಯು ಪ್ರಾರಂಭಗೊಂಡು ಇಲ್ಲಿಯವರೆಗೂ ಕನ್ನಡ, ತೆಲುಗು, ತಮಿಳು ಭಾಷೆ ಸೇರಿದಂತೆ ಹಲವು ಚಿತ್ರಗಳ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿದೆ. ರಜನಿಕಾಂತ್ ಅಭಿನಯದ ‘ದಳಪತಿ’ ಹಾಡುಗಳನ್ನು ಕೊಂಡು ಹೆಸರು ಮಾಡಿತ್ತು. ಈ ವರ್ಷದಲ್ಲಿ ಅಧಿಕ ಮೊತ್ತ ನೀಡಿ ‘ಬಾಹುಬಲಿ’ ಆಡಿಯೋವನ್ನು ತೆಗೆದುಕೊಂಡು ಭಾರತಾದ್ಯಂತ ಪ್ರಸಿದ್ದಿಯಗಿದೆ. ಇದರ ಬೆನ್ನಲ್ಲೆ ಚಂದನವನಕ್ಕೆ ಹೆಮ್ಮೆ ತಂದುಕೊಡುತ್ತಿರುವ ‘ಕೆ..ಜಿ.ಎಫ್’ ಚಿತ್ರದ ಐದು ಭಾಷೆಯ ಹಾಡುಗಳಿಗೆ ಮೂರು ಕೋಟಿ ಅರವತ್ತು ಲಕ್ಷ ನೀಡಿರುವುದು ಮತ್ತೂಂದು ದಾಖಲೆಗೆ ಸೇರಿಕೊಂಡಿದೆ. ಸದರಿ ಸಂಸ್ಥೆಯಿಂದ ಫಿಲಿಂ ಹಾಡುಗಳು ಅಲ್ಲದೆ ಸುಗಮಸಂಗೀತ, ಜಾನಪದ, ಭಕ್ತಿಗೀತೆಗಳು ಇರುವುದು ವಿಶೇಷ. ಅಣ್ಣನಿಗೆ ಬಲಗೈಯಂತೆ ವೇಲು ಅವರನ್ನು ಗಾಂಧಿನಗರದಲ್ಲಿ ಎಲ್ಲರೂ ಪ್ರೀತಿಯಿಂದ ಲಹರಿವೇಲು ಅಂತ ಕರೆಯುತ್ತಾರೆ. ಒಂದು ಲಕ್ಷದ ಎಪ್ಪತ್ತೈದು ಸಾವಿರ ಹಾಡುಗಳ ಸಂಗ್ರಹಣೆ ಇರುವ ಏಕೈಕ ಸಂಸ್ಥೆಯೆಂದು ಹೇಳಲಾಗಿದೆ. ಸದ್ಯ ನಟಸಾರ್ವಭೌಮ, ರಿವಿಲ್, ರಾಜ್ದೂತ್ ಸೇರಿದಂತೆ ಹಲವು ಸಿನಿಮಾಗಳು ಇವರ ಕಂಪೆನಿಯಿಂದ ಹೊರಬರಲಿದೆ.
Be the first to comment