x&y

ತೆರೆಗೆ ಬರಲು ಸಿದ್ಧಗೊಂಡ ‘ಎಕ್ಸ್‌ ಆಂಡ್‌ ವೈ’

‘ರಾಮಾ ರಾಮಾ ರೆ’ ಸಿನಿಮಾ  ಖ್ಯಾತಿಯ ನಿರ್ದೇಶಕ ಡಿ.ಸತ್ಯಪ್ರಕಾಶ್‌ ನಿರ್ದೇಶನದ ‘ಎಕ್ಸ್‌ ಆಂಡ್‌ ವೈ’ ಚಿತ್ರ ತೆರೆಗೆ ಬರಲು ಸಿದ್ಧಗೊಂಡಿದೆ.

‘ಎಕ್ಸ್‌ ಆಂಡ್‌ ವೈ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಇದೊಂದು ಫ್ಯಾಂಟಸಿ ಹ್ಯೂಮರ್‌ ಜಾನರ್‌ನ ಚಿತ್ರವಾಗಿದ್ದು, ಮದುವೆ ಆದವರಿಗೆ, ಆಗುತ್ತಿರುವವರಿಗೆ ಹಾಗೂ ಆಗಬೇಕು ಅಂದುಕೊಂಡವರಿಗೆ ಎಲ್ಲರಿಗೂ ಕನೆಕ್ಟ್‌ ಆಗುವ ಮನರಂಜನಾತ್ಮಕ ಕಥೆ ಹೊಂದಿದೆ.

‘ಎಕ್ಸ್‌ ಆಂಡ್‌ ವೈ’ ಕ್ರೋಮೋಝೋಮ್‌ಗಳನ್ನು ಪ್ರತಿನಿಧಿಸುತ್ತವೆ. ಆದರೆ ಇದು  ಕ್ರೋಮೋಝೋಮ್‌ಗೆ ಸಂಬಂಧ ಪಟ್ಟಿರುವ ಚಿತ್ರವಲ್ಲ.ಇಡೀ ಸಮಾಜ ಬೆಸೆದಿರುವುದು ಈ ಕ್ರೋಮೋಝೋಮ್‌ ಮೇಲೆ. ಹೀಗಾಗಿ ಈ ಶೀರ್ಷಿಕೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರಲು ಯತ್ನಿಸುತ್ತಿದ್ದೇವೆ’ ಎಂದಿದ್ದಾರೆ ನಿರ್ದೇಶಕ ಸತ್ಯಪ್ರಕಾಶ್‌.

‘ಮ್ಯಾನ್‌ ಆಫ್‌ ದ ಮ್ಯಾಚ್‌’ ಚಿತ್ರದ ನಟ ಅಥರ್ವ ಪ್ರಕಾಶ್‌, ‘ದೂರದರ್ಶನ’ ಸಿನಿಮಾ ನಾಯಕಿ ಅಯನಾ ಹಾಗೂ ಬೃಂದಾ ಆಚಾರ್ಯ ‘ಎಕ್ಸ್‌ ಆಂಡ್‌ ವೈ’ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ದೊಡ್ಡಣ್ಣ, ವೀಣಾ ಸುಂದರ್‌, ಸುಂದರ್‌  ತಾರಾಗಣದಲ್ಲಿದ್ದಾರೆ.

ಚಿತ್ರ ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಸತ್ಯ ಪಿಕ್ಚರ್ಸ್‌ ಬ್ಯಾನರ್‌ ನಿರ್ಮಾಣದ   ಚಿತ್ರಕ್ಕೆ ಲವಿತ್‌ ಛಾಯಾ ಗ್ರಹಣ, ಕೌಶಿಕ್‌ ಹರ್ಷ ಸಂಗೀತ, ಬಿ.ಎಸ್‌.ಕೆಂಪರಾಜು ಸಂಕಲನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!