‘ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಹೇಗೆ ಓಡ್‌ಸ್ತಿರಾ?’ ಎಂದು ಲಾಯರ್ ಜಗದೀಶ್ ಬಿಗ್ ಬಾಸ್‌ಗೆ ಆವಾಜ್ ಹಾಕಿದ್ದಾರೆ.
ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಮನೆ ತೊರೆಯುವ ನಿರ್ಧಾರ ತೆಗೆದುಕೊಂಡಿರುವ ಜಗದೀಶ್, ಮಾನವೀಯತೆ ಇಲ್ಲದ ಜಾಗದಲ್ಲಿ ಇರಲು ಸಾಧ್ಯವಿಲ್ಲ ಎಂದಿದ್ದಾರೆ.
ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್‌ಬಾಸ್ ಹೇಗೆ ಓಡ್‌ಸ್ತಿರಾ? ಬಿಗ್‌ಬಾಸ್ ಕಾರ್ಯಕ್ರಮದ ಹೆಸರು ಹಾಳು ಮಾಡುವುದಾಗಿ, ಅಲ್ಲಿಗೆ ಯಾರು ಕಾಲಿಡದಂತೆ ಮಾಡುವುದಾಗಿಯೂ ಹೇಳಿದ್ದಾರೆ.
ಬಿಗ್‌ಬಾಸ್ ರಿಯಾಲಿಟಿ ಶೋ ಆರಂಭವಾಗಿ ಮೂರನೇ ದಿನಕ್ಕೆ ಜಗದೀಶ್ ಬಿಗ್‌ಬಾಸ್ ಮನೆ ತೊರೆಯುವುದಾಗಿ ಹೇಳಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಸ್ವರ್ಗ ನಿವಾಸಿಯಾಗಿರುವ ಜಗದೀಶ್, ನರಕ ನಿವಾಸಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ನರಕ ನಿವಾಸಿಗಳಿಗೆ ಸ್ವರ್ಗ ನಿವಾಸಿಗಳ ಆಹಾರ ಕೊಡುವುದು, ಬಿಸಿ ನೀರು ಕಾಯಿಸಿ ಕೊಡುವುದು, ನರಕ ನಿವಾಸಿಗಳು ಮಾಡಬೇಕಾದ ಕೆಲಸಗಳನ್ನು ತಾವೇ ಮಾಡುವುದು ಹೀಗೆ ಅನೇಕ ವಿಚಾರಕ್ಕೆ ಜಗದೀಶ ಮನೆಯವರ ಕಂಗಣ್ಣಿಗೆ ಗುರಿಯಾಗಿದ್ದಾರೆ. ತಕ್ಕಡಿ ಭಾಗ್ಯ’ ಟಾಸ್ಕ್‌ನಲ್ಲಿಯೂ ಜಗದೀಶ್ ವಿರುದ್ಧ ಕ್ಯಾಪ್ಟನ್ ಧನರಾಜ್ ಮತ್ತು ಮಾನಸ ಸಂತೋಷ್ ಕೆಂಡಾಮಂಡಲವಾಗಿದ್ದರು.
ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಪದೇ ಪದೇ ತಪ್ಪು ಮಾಡುತ್ತಿದ್ದಾರೆ. ಜಗದೀಶ್ ಅವರು ನರಕದಲ್ಲಿ ಇರುವವರಿಗೆ ಬಿಸಿ ನೀರನ್ನು ಕೊಟ್ಟ ಕಾರಣದಿಂದ ಸ್ವರ್ಗದಲ್ಲಿರುವ ಸ್ಪರ್ಧಿಗಳ ಲಕ್ಷುರಿ ಐಟಂಗಳನ್ನು ಬಿಗ್ ಬಾಸ್ ಹಿಂಪಡೆದಿದ್ದಾರೆ. ಘಟನೆ ಬಳಿಕ ಜಗದೀಶ್ ಮತ್ತೊಮ್ಮೆ ಬಿಸಿ ನೀರು ನೀಡಿದ್ದಾರೆ. ಬಿಸ್ಕತ್, ಹಣ್ಣುಗಳನ್ನು ನರಕ ನಿವಾಸಿಗಳಿಗೆ ನೀಡಿದ್ದಾರೆ. ಇದನ್ನು ನೋಡಿದ ಬಿಗ್ ಬಾಸ್ ಇಡೀ ಮನೆಗೆ ಶಿಕ್ಷೆ ನೀಡಿ ಮನೆಯಲ್ಲಿ ಮಾಡಿದ ಅಡುಗೆ, ದಿನಸಿ ಸಾಮಗ್ರಿ, ಹಣ್ಣು-ಹಂಪಲುಗಳನ್ನು ಹಿಂದಿರುಗಿಸಿ ಕೊಡುವಂತೆ ಆದೇಶ ಕೊಟ್ಟಿದ್ದಾರೆ.
ಸ್ವರ್ಗದಲ್ಲಿರುವ ಎಲ್ಲರಿಗೂ ಮನೆಯ ಸೌಲಭ್ಯಗಳು ಇರುತ್ತವೆ. ಆದರೆ ನರಕದಲ್ಲಿ ಇರುವವರಿಗೆ ಯಾವ ಸೌಲಭ್ಯವೂ ಇರುವುದಿಲ್ಲ. ಉದ್ದೇಶಪೂರ್ವಕವಾಗಿ ಜಗದೀಶ್ ಅವರು ಸ್ವರ್ಗವನ್ನು ನರಕ ಮಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ 17 ಸ್ಪರ್ಧಿಗಳಿದ್ದಾರೆ. ಈ ವಾರ ಒಂದು ಎಲಿಮಿನೇಷನ್ ನಡೆಯಲಿದ್ದು ನಾಮಿನೇಟ್ ಆದವರ ಪಟ್ಟಿಯಲ್ಲಿ ಜಗದೀಶ್ ಇದ್ದಾರೆ. ಜಗದೀಶ್ ಅವರು ಮನೆಯಿಂದ ಹೊರ ನಡೆಯುತ್ತಾರಾ? ಅಥವಾ ಉಳಿದುಕೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
Be the first to comment