‘ಮಾರ್ಟಿನ್’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

ಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

ಚಿತ್ರದ ರನ್‌ ಟೈಮ್ 2 ಗಂಟೆ 28 ನಿಮಿಷ ಎಂದು ಗೊತ್ತಾಗಿದೆ. ‘ಮಾರ್ಟಿನ್’ ಚಿತ್ರಕ್ಕೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಭಾರತೀಯನೊಬ್ಬ ಪಾಕಿಸ್ತಾನದ ಗಡಿ ದಾಟಿ ಅಲ್ಲಿಗೆ ಹೋದರೆ ಏನೆಲ್ಲಾ ಆಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ.

ಎ. ಪಿ ಅರ್ಜುನ್ ನಿರ್ದೇಶನದ ಚಿತ್ರದಲ್ಲಿ ಧ್ರುವ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ. ಅಂದಾಜು 100 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ಮೂಡಿದೆ.  ಈಗಾಗಲೇ ಟೀಸರ್‌ಗಳಿಂದಲೇ ಚಿತ್ರ ಭಾರೀ ಸದ್ದು ಮಾಡಿದೆ.

240 ದಿನಗಳ ಕಾಲ ‘ಮಾರ್ಟಿನ್’ ಸಿನಿಮಾ ಚಿತ್ರೀಕರಣ ನಡೆದಿದೆ. ಕಾಶ್ಮೀರ ಸೇರಿ ಹಲವೆಡೆ ಸಿನಿಮಾ ಸೆರೆ ಹಿಡಿಯಲಾಗಿದೆ. ‘ಮಾರ್ಟಿನ್’ ಚಿತ್ರದ ಹಾಡುಗಳಿಗೆ ಮಣಿಶರ್ಮ ಟ್ಯೂನ್ ಹಾಕಿದ್ದಾರೆ. ರವಿ ಬಸ್ರೂರು ರೀರೆಕಾರ್ಡಿಂಗ್ ಮಾಡಿದ್ದಾರೆ.  ಸತ್ಯಾ ಹೆಗಡೆ ಕ್ಯಾಮರಾ ಕಣ್ಣಲ್ಲಿ ಸಿನಿಮಾ ಸೆರೆಯಾಗಿದೆ.

ಅಭಿಮಾನಿಗಳು ‘ಮಾರ್ಟಿನ್’ ಆರ್ಭಟ ನೋಡಲು ಚಾತಕಪಕ್ಷಿಗಳಂತೆ ಕಾಯತ್ತಿದ್ದಾರೆ.  ಅಕ್ಟೋಬರ್ 6 ಆಕ್ಷನ್ ಪ್ರಿನ್ಸ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅದೇ ಸಂಭ್ರಮದಲ್ಲಿ ‘ಮಾರ್ಟಿನ್’ ಇಂಟ್ರೊಡಕ್ಷನ್ ಸಾಂಗ್ ರಿಲೀಸ್ ಆಗುವ ಸಾಧ್ಯತೆಯಿದೆ.

ಮಾರ್ಟಿನ್ ಅಕ್ಟೋಬರ್ 11ರಂದು ದೇಶ, ವಿದೇಶಗಳಲ್ಲಿ ಬಿಡುಗಡೆ ಆಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!