‘ಮಿಂಚುಹುಳು’ ಅ.4ಕ್ಕೆ ತೆರೆಗೆ

ರಾಜ್‌ಕುಮಾರ್‌ ಸಹೋದರ ವರದಪ್ಪ ಮೊಮ್ಮಗ ಪೃಥ್ವಿ ರಾಜ್‌ಕುಮಾರ್‌ ಅಭಿನಯದ ಚೊಚ್ಚಲ‌ ಚಿತ್ರ ‘ಮಿಂಚುಹುಳು’ ಅಕ್ಟೊಬರ್ 4ರಂದು ತೆರೆಗೆ ಬರುತ್ತಿದೆ.

ಈ ಚಿತ್ರಕ್ಕೆ ರಾಜಗೋಪಾಲ್ ದೊಡ್ಡಹುಲ್ಲೂರು ಬಂಡವಾಳ ಹೂಡಿದ್ದಾರೆ. ಮಹೇಶ್ ಕುಮಾರ್ ಅವರ ಕಥೆ, ಚಿತ್ರಕಥೆ, ನಿರ್ದೇಶನವಿದೆ. ಮಾಸ್ಟರ್‌ಪ್ರಿತಂ, ಪರಶಿವ ಮೂರ್ತಿ, ರಶ್ಮಿ ಗೌಡ, ಪೂರ್ವಿಕಾ ಮುಂತಾದವರು ತಾರಾಗಣದಲ್ಲಿದ್ದಾರೆ.

”ಜವಾಬ್ದಾರಿ ಇಲ್ಲದ ತಂದೆ ಹಾಗೂ ಮಗನ ನಡುವಿನ ಕಥೆ ಇದಾಗಿದ್ದು, ಅವರ ಬದುಕಿನ ಕಷ್ಟ, ಸವಾಲುಗಳನ್ನು ಹೇಳಿದ್ದೇವೆ. ಮಿಂಚು ಹುಳುವೊಂದನ್ನು ನೋಡಿದ ಮಗನಿಗೆ ಹೊಸ ಆಲೋಚನೆ ಬರುತ್ತದೆ. ಆ ಆಲೋಚನೆ ಏನು? ಅದರಿಂದ ಬದುಕಿನಲ್ಲಿ ಏನೆಲ್ಲ ಆಗುತ್ತದೆ ಎಂಬುದು ಚಿತ್ರಕಥೆ. ಈ ಚಿತ್ರವಾಗಲು ಪುನೀತ್ ರಾಜ್‌ಕುಮಾರ್‌ ಅವರೇ ಕಾರಣ’ ಎನ್ನುತ್ತಾರೆ ನಿರ್ದೇಶಕ ಮಹೇಶ್ ಕುಮಾರ್.

ಭೂನಿ ಪಿಕ್ಚರ್ಸ್ ನಿರ್ಮಾಣದ ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತ, ಅಂಜಿ ಕೆ. ವೀರ ಛಾಯಾಗ್ರಹಣವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!