ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮೂರೇ ದಿನ ಬಾಕಿಯಿದ್ದು, ಯಾರೆಲ್ಲಾ ಮನೆಯೊಳಗೆ ಪ್ರವೇಶಿಸಲಿದ್ದಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಕಿರುತೆರೆಯ ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಸುದ್ದಿಯಲ್ಲಿರುವ ಪ್ರೇಮಾ ಹಿರಿಯ ನಟಿ ಕೆಟಗರಿಯಲ್ಲಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಜನರ ಗಮನ ಸೆಳೆದ ಪ್ರತಿಭೆಗಳಲ್ಲಿ ‘ಗಿಚ್ಚಿ ಗಿಲಿ ಗಿಲಿ’ ವಿನ್ನರ್ ಹುಲಿ ಕಾರ್ತಿಕ್ ಹೆಸರು ಕೇಳಿಬರುತ್ತಿದೆ. ಅಲ್ಲದೆ ಚಂದ್ರ ಪ್ರಭಾ ಕೂಡಾ ವೀಕ್ಷಕರ ಲಿಸ್ಟ್ ನಲ್ಲಿದ್ದಾರೆ.
ಕಲರ್ಸ್ ಕನ್ನಡದ ಧಾರವಾಹಿಗಳ ಮೂಲಕ ಜನಮನ ಗೆದ್ದ ದೀಪಕ್ ಗೌಡ, ಭವ್ಯಾ ಗೌಡ, ವರುಣ್ ಆರಾಧ್ಯ ಹೆಸರೂ ಕೇಳಿಬರುತ್ತಿದೆ. ಪ್ರತೀ ಬಾರಿ ಶೋನಲ್ಲಿ ಒಬ್ಬ ಸಿಂಗರ್ ಗೆ ಅವಕಾಶ ಸಿಗುತ್ತದೆ. ಐಶ್ವರ್ಯಾ ರಂಗರಾಜನ್ ಹೆಸರು ಕೇಳಿ ಬರುತ್ತಿದೆ.
ಇದುವರೆಗೆ 10 ಬಿಗ್ ಬಾಸ್ ಶೋಗಳಲ್ಲಿ ವಿನ್ ಆಗಿದ್ದು ಕೇವಲ ಒಬ್ಬ ಮಹಿಳಾ ಸ್ಪರ್ಧಿ ಮಾತ್ರ. ಉಳಿದ ಎಲ್ಲಾ 9 ಸೀಸನ್ ಗಳಲ್ಲಿ ಪುರುಷರೇ ಗೆದ್ದಿದ್ದಾರೆ. ಹೀಗಾಗಿ ಈ ಬಾರಿಯಾದರೂ ಮಹಿಳಾ ಸ್ಪರ್ಧಿ ಗೆಲ್ಲುವಂತಾಗಲಿ. ಒಬ್ಬ ಪ್ರಬಲ ಮಹಿಳಾ ಸ್ಪರ್ಧಿಯನ್ನು ಮನೆಯೊಳಗೆ ಕಳುಹಿಸಲಿಎಂದು ವೀಕ್ಷಕರು ಆಶಿಸಿದ್ದಾರೆ.
Be the first to comment