ಬೇಗೂರು ಕಾಲೋನಿ

‘ಬೇಗೂರು ಕಾಲೋನಿ’ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ

ಫ್ಲೈಯಿಂಗ್ ಕಿಂಗ್ ಮಂಜು ಕಥೆ ಬರೆದು ನಿರ್ದೇಶಿಸಿರುವ ‘ಬೇಗೂರು ಕಾಲೋನಿ’ ಚಿತ್ರದ ಕ್ಯಾರೆಕ್ಟರ್ ಮೋಶನ್ ಪೋಸ್ಟರ್ ಬಿಡುಗಡೆ  ಆಗಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.  ದುನಿಯಾ ವಿಜಯ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ ಎನ್ ಸುರೇಶ್ , ಖ್ಯಾತ ಸಂಭಾಷಣೆಗಾರ ಮಾಸ್ತಿ ಮತ್ತಿತರರು ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ವಿಜಯ್ ಕುಮಾರ್ ಮಾತನಾಡಿ, ಹೋರಾಟ ಇಟ್ಕೊಂಡು ಮಾಡಿರುವ ಕಥೆ ಬೇಗೂರು ಕಾಲೋನಿ ಎನಿಸುತ್ತದೆ.  ಈ ಹೋರಾಟದ ಕಥೆ ಸರ್ಕಾರಕ್ಕೆ ಮುಟ್ಟಲಿ. ಕಾಲೋನಿ ಇಲ್ಲದೇ ನಗರ ಆಗಲ್ಲ. ಕಾಲೋನಿ ಶಕ್ತಿ ಶಕ್ತಿಯೇ. ಮಾಲ್ ನಗರ ಆಗುವುದು ಕಾಲೋನಿಯಿಂದ. ಕಾಲೋನಿಯವರು ಕಾಲಿಗೆ ಸಮ ಅಲ್ಲ. ಕಾಲೋನಿಯವರು ಮೊದಲು ಸಿನಿಮಾ ನೋಡಿ ಆಮೇಲೆ ಮಾಲ್ ನವರು ಬಂದು ನೋಡ್ತಾರೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ನಿರ್ದೇಶಕ ಫ್ಲೈಯಿಂಗ್ ಮಂಜು ಮಾತನಾಡಿ, ಕಾಲೋನಿಯಲ್ಲಿ ಎಲ್ಲಾ ರೀತಿ ಜನ ವಾಸ ಮಾಡ್ತಾರೆ. ಅಲ್ಲಿ ನಡೆಯುವ ಒಂದು ಸಣ್ಣ ಕಥೆ ಕಾಲೋನಿ. ಇದು ಹೋರಾಟದ ಕಥೆ ಎಂದರು.

ನಟ ರಾಜೀವ್ ಹನು ಮಾತನಾಡಿ, ಫ್ಲೈಯಿಂಗ್ ಮಂಜು ಕೆಲಸ ಪರದೆಯ ಮೇಲೆ ಕಾಣುತ್ತಿದೆ. ರಾಜೀವ್ ರಾಘವನಾಗಿ ನಿಂತುಕೊಳ್ತಾನೆ ಎಂಬ ನಂಬಿಕೆ ಇದೆ ಎಂದರು.

ಆನಂದ್ ಅಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬೇಗೂರು ಕಾಲೋನಿ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳನ್ನು ಈ ವಿಡಿಯೋದಲ್ಲಿ ಪರಿಚಯಿಸಲಾಗಿದೆ. ಶೀಘ್ರದಲ್ಲೇ ಚಿತ್ರತಂಡ ಟೀಸರ್ ರಿಲೀಸ್ ಮಾಡುವ ನಿರೀಕ್ಷೆಯಲ್ಲಿದೆ.

ಬೇಗೂರು ಕಾಲೋನಿ

ಚಿತ್ರವನ್ನು ಶ್ರೀಮಾ ಸಿನಿಮಾಸ್ ಬ್ಯಾನರ್ ನಲ್ಲಿ ಎಂ ಶ್ರೀನಿವಾಸ್ ಬಾಬು ನಿರ್ಮಾಣ ಮಾಡಿದ್ದಾರೆ. ರಾಜೀವ್ ಹನು ಸೇರಿದಂತೆ ಫೈಯಿಂಗ್ ಕಿಂಗ್ ಮಂಜು, ಪಲ್ಲವಿ ಹರ್ವ, ಕೀರ್ತಿ ಭಂಡಾರಿ, ಪೋಸಾಗ್ನಿ ಕೃಷ್ಣ ಮುರಳಿ, ಬಾಲ ರಾಜವಾಡಿ ಬಣ್ಣ ಹಚ್ಚಿದ್ದಾರೆ.

ವಿಜಯ್ ಸೋವರ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಪ್ರಮೋದ್ ತಳವಾರ್ ಸಂಕಲನ, ಹಾಗೂ ಕಾರ್ತಿಕ್ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ ಚಿತ್ರಕ್ಕಿದೆ.

ಬೇಗೂರು ಕಾಲೋನಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!