45

ಉಪ್ಪಿಯ ’45’ ಲುಕ್ ಔಟ್!

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 45 ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಉಪ್ಪಿಯ ಜನ್ಮ ದಿನಕ್ಕೆ ಉಪ್ಪಿಯ ಮಸ್ತ್ ಲುಕ್ ರಿಲೀಸ್ ಆಗಿದೆ.  ಸಿನಿಮಾದ ಲುಕ್  ಸಖತ್ ಸ್ಟೈಲಿಶ್  ಆಗಿದೆ. ಕೈಯಲ್ಲಿ ಸಿಗಾರ್ ಇದೆ. ಲುಕ್‌ ಅಲ್ಲಿ ಬೆಂಕಿ ಇದೆ. ಲಾಂಗ್ ಹೇರ್ ಸ್ಟೈಲ್ ಬೇರೆ ಇದೆ. ಕೈಗಳಲ್ಲಿ ವಿಶೇಷ ರಿಂಗ್ ಇವೆ. ಕಣ್ಣಿಗೆ ಕೂಲಿಂಗ್ ಗ್ಲಾಸ್ ಕೂಡ ಇದೆ.

ಉಪೇಂದ್ರ ಜನ್ಮ ದಿನಕ್ಕೇ  ಡೈರೆಕ್ಟರ್ ಅರ್ಜುನ್ ಜನ್ಯ   ಲುಕ್ ರಿವೀಲ್ ಮಾಡಿದ್ದಾರೆ. ಆದರೆ ಸಿನಿಮಾದ ಕ್ಯಾರೆಕ್ಟರ್‌ ಬಗ್ಗೆ ಅರ್ಜುನ್ ಜನ್ಯ  ಏನೂ ಬಿಟ್ಟು ಕೊಟ್ಟಿಲ್ಲ.

ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ಶಿವರಾಜ್ ಕುಮಾರ್ ಇದ್ದಾರೆ. ಇವರ ಲುಕ್‌ಗಳಲ್ಲಿ ಸದ್ಯ ಎರಡು ಲುಕ್ ರಿವೀಲ್ ಆಗಿವೆ.  ಮೊದಲು ಶಿವಣ್ಣನ ಲುಕ್ ರಿವೀಲ್  ಆಗಿದೆ.  ಇನ್ನು ರಾಜ್ ಬಿ ಶೆಟ್ಟಿ ಪಾತ್ರ ಹೇಗಿರುತ್ತದೆ ಅನ್ನುವ ಕುತೂಹಲ ಇದೆ.

ಈ ಸಿನಿಮಾಗಳ ಜೊತೆಗೆ ಉಪೇಂದ್ರ ಬುದ್ಧಿವಂತ 2 ಹಾಗೂ ತ್ರಿಶೂಲಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.‌ ಯುಐ ಸಿನಿಮಾ ಅಕ್ಟೋಬರ್‌ 12 ರಂದು  ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.‌

45

Be the first to comment

Leave a Reply

Your email address will not be published. Required fields are marked *

Translate »
error: Content is protected !!