ʼಕೂಲಿʼಯಲ್ಲಿ ರಚಿತಾ ರಾಮ್ ಖಳನಾಯಕಿ!

ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕೂಲಿ ಚಿತ್ರದಲ್ಲಿ  ಖಳನಾಯಕಿ ಪಾತ್ರ ಮಾಡುತ್ತಿದ್ದಾರೆಂದು  ತಿಳಿದು ಬಂದಿದೆ.

ರಚಿತಾ ರಾಮ್ ಅವರು ಸ್ಯಾಂಡಲ್ ವುಡ್ ನಲ್ಲಿ ಈವರೆಗೂ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಅವರು  ಖಳನಾಯಕಿ ಪಾತ್ರದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಚಿತಾ ರಾಮ್ ಅವರ ಈ ಹೊಸ ಪ್ರಯತ್ನ ಪ್ರೇಕ್ಷಕರಲ್ಲಿ ಕುತೂಹಲಗಳನ್ನು ಮೂಡಿಸಿದೆ.  ರಚಿತಾ ರಾಮ್ ನಟಿಸುತ್ತಿರುವುದನ್ನು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ಕೂಲಿ ಚಿತ್ರ ರಜನಿಕಾಂತ್ ಅವರ 171 ನೇ ಚಿತ್ರವಾಗಿದ್ದು, ಚಿತ್ರದಲ್ಲಿ ಶ್ರುತಿ ಹಾಸನ್ ಮತ್ತು ಮಹೇಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಟಿ ರಮ್ಯಾ ಕೃಷ್ಣ ಅವರೂ ಕೂಡ ನಟಿಸುತ್ತಿದ್ದಾರೆಂದು ತಿಳಿದು ಬಂದಿದೆ.

ಚಿತ್ರಕ್ಕೆ ಮೊದಲು ತಲೈವಾ 171 ಎನ್ನುವ ಶೀರ್ಷಿಕೆ ಇಡಲಾಗಿತ್ತು. ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತಮಿಳಿನ ಜೊತೆಗೆ ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ, ಗಿರೀಶ್ ಗಂಗಾಧರನ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

ರಚಿತಾ ಅವರು ನಾಗಶೇಖರ್ ಅವರ ಸಂಜು ವೆಡ್ಸ್ ಗೀತಾ 2 ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಝೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!