ಚಿತ್ರ: ಶಾಲಿವಾಹನ ಶಕೆ
ನಿರ್ದೇಶಕ: ಗಿರೀಶ್
ತಾರಾ ಬಳಗ: ಸುಂದರ್, ವೀಣಾ, ಗಿರೀಶ್ ಇತರರು
ರೇಟಿಂಗ್: 3.5
ಕಲಿಯುಗದಲ್ಲಿ ನಡೆಯುವ ಸತ್ಯ ಯುಗದ ಕಥಾಹಂದರವನ್ನು ಹೊಂದಿದ ಚಿತ್ರ ಶಾಲಿವಾಹನ ಶಕೆ.
ಸತ್ಯ ಯುಗದಲ್ಲಿ ಶೂನ್ಯ ಎನ್ನುವ ವ್ಯಾಪಾರಿ ಶಾಪದ ಪರಿಣಾಮವಾಗಿ ಸುಳ್ಳು ಹೇಳಿದ. ಇದರಿಂದ ದೇವತೆಗಳು ಆತನನ್ನು ತಪ್ಪು ತಿದ್ದಿಕೊಳ್ಳಲು ಹೇಳಿದರು. ಬ್ರಹ್ಮನ ಮರೆಹೋದ ಶೂನ್ಯ ತಪಸ್ಸಿನ ಮೂಲಕ ಶಂಖವನ್ನು ಬ್ರಹ್ಮನಿಂದ ಪಡೆದು ತಾನು ಇದ್ದ ಸ್ಥಳಕ್ಕೆ ಹೋಗಿ ತಪ್ಪು ತಿದ್ದಿಕೊಂಡು ವಾಪಸ್ ಬರುವಂತೆ ಅನುಗ್ರಹ ಪಡೆದುಕೊಂಡ.
ತಪ್ಪು ತಿದ್ದಿಕೊಂಡು ಬಂದ ಶೂನ್ಯ, ಬ್ರಹ್ಮನನ್ನು ಭೇಟಿ ಮಾಡುವ ವೇಳೆಗೆ ಶಂಖವನ್ನು ಮರೆತು ಬಿಟ್ಟ. ಬ್ರಹ್ಮ ಲೋಕದ ಒಂದು ದಿನ, ಭೂಲೋಕದ ಲಕ್ಷ ಕೋಟಿ ವರ್ಷಗಳಿಗೆ ಸಮವಾದ ಕಾರಣ ಶೂನ್ಯ ಭೂಲೋಕಕ್ಕೆ ಬಂದು ಶಂಖಕ್ಕಾಗಿ ಹುಡುಕಾಡಿದ. ಆದರೆ ಅವನಿಗೆ ಶಂಖ ಸಿಗಲಿಲ್ಲ. ಶೂನ್ಯನಿಗೆ ಯಾವ ಊರಿನಲ್ಲಿ ಶಂಖ ಸಿಗುತ್ತದೆ? ಏನೆಲ್ಲ ಬದಲಾವಣೆಗಳು ಆಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.
ಚಿತ್ರದಲ್ಲಿ ಗಿರೀಶ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಕ್ಕೆ ಮುಂದಕ್ಕೆ ಚಲಿಸುವಂತೆ ಮಾಡುವ ಟೈಮ್ ಲೂಪ್ ಕಥೆ ಗಮನ ಸೆಳೆಯುತ್ತದೆ. ರಂಗಭೂಮಿಯ ಕಲಾವಿದರು ಚಿತ್ರದ ಅಗತ್ಯಕ್ಕೆ ತಕ್ಕಂತೆ ನಟಿಸಿದ್ದಾರೆ.
ಅರುಣ್ ಸುರೇಶ್ ಛಾಯಾಗ್ರಹಣ ಚೆನ್ನಾಗಿದೆ. ಕಿನ್ನರಿ ಸಂಗೀತ ಚಿತ್ರದ ಕಥೆಗೆ ಪೂರಕವಾಗಿದೆ. ಗಟ್ಟಿ ಕಥೆಯ ಮೂಲಕ ಚಿತ್ರ ಪ್ರೇಕ್ಷಕರನ್ನು ಸೆರೆ ಹಿಡಿಯುತ್ತದೆ.
Be the first to comment