‘ಕೆಂಡದ ಸೆರಗು’ ಚಿತ್ರಕ್ಕೆ U/A ಪ್ರಮಾಣ ಪತ್ರ

ಬಿಗ್ ಬಾಸ್ ಖ್ಯಾತಿಯ ನಟಿ ಭೂಮಿ ಶೆಟ್ಟಿ ಕುಸ್ತಿ ಪಟು ಆಗಿ  ಕಾಣಿಸಿಕೊಂಡಿರುವ ‘ಕೆಂಡದ ಸೆರಗು’ ಚಿತ್ರಕ್ಕೆ ಸೆನ್ಸಾರ್ ಮಂಡಳಿ,  U/A ಪ್ರಮಾಣ ಪತ್ರ ಕೊಟ್ಟಿದೆ.

”ಕೆಂಡದ ಸೆರಗು ಚಿತ್ರದಲ್ಲಿ ಕುಸ್ತಿ ಇದೆ. ವೇಶ್ಯಾವಾಟಿಕೆಯ ಚಿತ್ರಣವೂ ಇದೆ. ಇಷ್ಟೆಲ್ಲ ಇರೋ ಚಿತ್ರಕ್ಕೆ ಸಂಭಾಷಣೆ ಬರೆಯೋದೆ ಒಂದು ಚಾಲೆಂಜ್ ಆಗಿತ್ತು. ಬರೆದ ಮೇಲೆ ಸೆನ್ಸಾರ್ ಏನ್ ಹೇಳುತ್ತದೆಯೋ ಅನ್ನುವ ಟೆನ್ಷನ್ ಕೂಡ ಇತ್ತು. ಸೆನ್ಸಾರ್ ಮುಗಿಯೋವರೆಗೂ ಟೆನ್ಷನ್ ಇತ್ತು. A ಪ್ರಮಾಣ ಪತ್ರ ಕೊಟ್ಟರೇ ಹೇಗೆ ಅನ್ನುವ ಆತಂಕ ಇತ್ತು. ಆದರೆ ನಮ್ಮ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಪ್ರಮಾಣ ಪತ್ರ ಕೊಟ್ಟಿಲ್ಲ. U/A ಪ್ರಮಾಣ ಪತ್ರ ಕೊಟ್ಟಿದೆ” ಎಂದು ಚಿತ್ರದ ಡೈರೆಕ್ಟರ್ ರಾಕಿ ಸೊಮ್ಲಿ ಹೇಳಿದ್ದಾರೆ.

ರಾಕಿ ಸೊಮ್ಲಿ  ತಮ್ಮದೇ ಕಾದಂಬರಿ ಆಧರಿಸಿ ಈ ಚಿತ್ರ ಮಾಡಿದ್ದಾರೆ. ಆಕ್ಷನ್ ಕ್ವೀನ್ ಮಾಲಾಶ್ರೀ ಕೂಡ  ಚಿತ್ರದಲ್ಲಿದ್ದಾರೆ.  ಚಿತ್ರದ ರಿಲೀಸ್ ತಡವಾಗಿದ್ದರಿಂದ ಈ ಸಿನಿಮಾ ಬರುತ್ತದೆಯೋ ಇಲ್ವೋ ಅನ್ನುವ ಡೌಟ್ ಕೂಡ ಇತ್ತು.

ಆದರೆ ಡೈರೆಕ್ಟರ್ ರಾಕಿ ಸೊಮ್ಲಿ , ”ಕೆಂಡದ ಸೆರಗು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತೇವೆ. ಇದರ ಜೊತೆಗೆ ಮತ್ತೊಂದು ಚಿತ್ರದ ವಿಷಯ ಹಂಚಿಕೊಳ್ಳುವೆ” ಎಂದು ಹೇಳಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!